ನ್ಯೂಸ್

36 ಲಕ್ಷ ರೂ. ಮೌಲ್ಯದ ವಾಚ್​ ಕಟ್ಟಿದ ಸಲ್ಲು; ರಾಮ ಮಂದಿರ ಕಲಾಕೃತಿಯ ಗಡಿಯಾರದ ವಿಶೇಷತೆ ಏನು ಗೊತ್ತಾ? | Salman Khan

Salman Khan: ಬಾಲಿವುಡ್​ ಭಾಯಿಜಾನ್​ ಸಲ್ಮಾನ್​ ಖಾನ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಸಿಕಿಂದರ್ ಸಿನಿಮಾ ಪ್ರಮೋಷನ್​ ಕಾರಣದಿಂದ ದೇಶದ ವಿವಿಧ ನಗರಗಳಲ್ಲಿ ಚಿತ್ರ ಪ್ರಚಾರಕ್ಕೆ ಹೊರಟಿದ್ದಾರೆ. ಇತ್ತೀಚಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಸಲ್ಲು ಗಮನರ್ಹವಾದ ಗಡಿಯಾರ ಕಟ್ಟುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು, ಸಲ್ಮಾನ್​ ಖಾನ್​​ ಬರಿ ಸಿನಿಮಾಗಳಿಗೆ ಮಾತ್ರ ಸುಲ್ತಾನ ಅಲ್ಲ, ಅವರು ಫ್ಯಾಶನ್​ನಲ್ಲಿಯೂ ಎತ್ತಿದ ಕೈ ಎಂದೇ ಹೇಳಬಹುದು. ಹೌದು, ಇದೀಗ ಅವರು ರಾಮಜನ್ಮ ಭೂಮಿ ಅಯೋಧ್ಯೆ ಕಲಾಕೃತಿಯುಳ್ಳ ಕಟ್ಟಿದ ಕೈ ಗಡಿಯಾರ ಎಲ್ಲರ ಗಮನ ಸೆಳೆಯುತ್ತಿದೆ. ಗಡಿಯಾರದ ವಿಶೇಷತೆ ಮತ್ತು ಬೆಲೆ ಎಷ್ಟು ಗೊತ್ತೆ?

ಗಡಿಯಾರದ ವಿಶೇಷತೆ..?

ಗಡಿಯಾರದ ಕಲಾಕೃತಿಯೂ ರಾಮಜನ್ಮ ಭೂಮಿ ಅಯೋಧ್ಯೆ (Ayodhya) ದೇವಾಲಯದ ಪ್ರೇರಣೆ ಪಡೆದಿದೆ. ಸಲ್ಮಾನ್​ ಕಟ್ಟಿದ ಅತ್ಯದ್ಭುತ ವಾಚ್ ಜಾಕೋಬ್ & ಕಂ ಬ್ರಾಂಡ್ ಕಂಪನಿಯಾದಗಿದ್ದು, 'ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ಟೈಟಾನಿಯಂ ಆವೃತ್ತಿ 2' ಎಂದು ಹೆಸರಿಸಲಾಗಿದೆ. ಐಷಾರಾಮಿಯ ದೇವಾಲಯಗಳ ಪರಂಪರನಯನ್ನೆ ಕೆತ್ತಲಾಗಿದೆ. ಬಾಲರಾಮ ವಿಗ್ರಹದ ಜತೆ ದೇವಾಲಯದ ಮೇರು ಕೃತಿಯನ್ನು ವಾಚ್‌ನಲ್ಲಿ ಕೆತ್ತಲಾಗಿದೆ. ಅಲ್ಲದೆ, ಸಮಯದ 12 ಗಂಟೆಯನ್ನು ಒಳಗೊಂಡಿದ್ದು, 9ಕ್ಕೆ ದೇವಾಲಯ, 3ಕ್ಕೆ ಭಗವಾನ್ ಹನುಮಾನ್ ಮತ್ತು 6ಕ್ಕೆ ಜೈಶ್ರೀರಾಮ್ ಎಂದು ಬರೆಯಲಾಗಿದೆ.

ಗಡಿಯಾರದ ಬೆಲೆ..?

ಅಭಿಷೇಕ್ ಕಟ್ಟಿರುವ ವಾಚ್‌ಗಳು ಜಗತ್ತಿನಲ್ಲಿ ಕೇಲವ 49 ಪೀಸ್‌ಗಳಿದ್ದು. ವರದಿಗಳ ಪ್ರಕಾರ ಈ ಐಷಾರಾಮಿ ಟೈಮ್‌ ಪೀಸ್ ಒಂದಕ್ಕೆ ಬರೊಬ್ಬರಿ 36,00,000(34 ಲಕ್ಷ ರೂ.) ಮೌಲ್ಯ ಹೊಂದಿದೆ. ಸಲ್ಮಾನ್ ತಮ್ಮ ಆನ್-ಸ್ಕ್ರೀನ್ ಸ್ವಭಾವ ಮತ್ತು ಆಫ್-ಸ್ಕ್ರೀನ್ ಲುಕ್‌ಗಳೊಂದಿಗೆ ಟ್ರೆಂಡ್‌ಗಳನ್ನು ಸೃಷ್ಟಿಸುತ್ತಲೇ ಇದ್ದಾರೆ, ನಿಜವಾದ ಫ್ಯಾಷನ್ ಎಂದರೆ ಒಬ್ಬರ ವ್ಯಕ್ತಿತ್ವವನ್ನು ಪ್ರಮುಖ ಆಯ್ಕೆಗಳೊಂದಿಗೆ ಬೆಸೆಯುವುದು ಎಂದು ಸಾಬೀತುಪಡಿಸುತ್ತಾರೆ.(ಏಜೆನ್ಸಿಸ್)