ನ್ಯೂಸ್

ಬೆದರಿಕೆ ಹಿನ್ನೆಲೆ; ಸಲ್ಮಾನ್​ ಖಾನ್​ಗೆ ಇನ್ನು ಮುಂದೆ Y+ ಭದ್ರತೆ

Bengaluru - General - Rama Kishan K V

ನವದೆಹಲಿ: ಬಾಲಿವುಡ್​​ ನಟ ಸಲ್ಮಾನ್​ ಖಾನ್​​ಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ Y+ ಭದ್ರತೆ ನೀಡಲು ನಿರ್ಧರಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಸಲ್ಮಾನ್​ ಖಾನ್​ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಬೆದರಿಕೆ ಪತ್ರ ಬಂದಿತ್ತು. ನಂತರ ಸಲ್ಮಾನ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ Y+ ಭದ್ರತೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಸದ್ಯ ಮುಂಬೈ ಪೊಲೀಸರು ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದಾರೆ. ಕೆಲವು ತಿಂಗಳ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಾಗೂ ಗೋಲ್ಡಿ ಬ್ರಾರ್ ತಂಡದಿಂದ ಸಲ್ಮಾನ್​ ಖಾನ್ ಅವರನ್ನು ಕೊಲೆ ಮಾಡಲು ಹೊಂಚು ಹಾಕಲಾಗಿತ್ತು ಎಂದು ವರದಿಯಾಗಿತ್ತು. ಅಲ್ಲದೆ 2017ರಲ್ಲಿ ತಮ್ಮ ಬಾಂಗ್ರಾದಲ್ಲಿರುವ ನಿವಾಸದಲ್ಲಿ ಹುಟ್ಟು ಹಬ್ಬ ಆಚರಿಸುವ ವೇಳೆ ಹಾಗೂ 2018ರಲ್ಲಿ ಫಾರ್ಮ್​​ಹೌಸ್​ನಲ್ಲಿದ್ದಾಗ ಸಲ್ಮಾನ್ ಮೇಲೆ ಕೊಲೆ ಯತ್ನ ನಡೆದಿತ್ತು. (ಎಜೆನ್ಸೀಸ್)