ನ್ಯೂಸ್

ನಟ Sushant Singh Rajput ಅವರದ್ದು  ಆತ್ಮಹತ್ಯೆ ಅಲ್ಲ..ಕೊಲೆ! ಸ್ಫೋಟಕ ಹೇಳಿಕೆ ನೀಡಿದ ನಟಿ ಸೋಮಿ ಅಲಿ

ಮುಂಬೈ:  ( Sushant Singh Rajput ) ಬಾಲಿವುಡ್ ನಟ ಸಲ್ಮಾನ್ ಖಾನ ಅವರ ಮಾಜಿ ಪ್ರೇಯಸಿ ಸೋಮಿ ಅಲಿ ಇತ್ತಿಚೇಗೆ  ಸೋಶಿಯಲ್​​ ಮೀಡಿಯಾದಲ್ಲಿ ಆಸ್ಕ್ ಮೀ ಎನಿಥಿಂಗ್ ಎನ್ನುವುದನ್ನು ನೆಟ್ಟಿಗರ ಮುಂದೆ ಇಟ್ಟಿದ್ದರು.  ಈ ವೇಳೆ  ನಟ ಸುಶಾಂತ್ ಸಿಂಗ್ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಆಸ್ಕ್ ಮೀ ಎನಿಥಿಂಗ್​​ನಲ್ಲಿ  ಸೋಮಿ ಅವರಿಗೆ ಸುಶಾಂತ್ ಸಿಂಗ್ ಪ್ರಕರಣದ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸೋಮಿ " ವರನ್ನು ಬಾಲಿವುಡ್‌ನಿಂದ ಮೂಲೆಗುಂಪು ಮಾಡಿದ ರೀತಿ ನಿಜವಾಗಿಯೂ ನಿರಾಶಾದಾಯಕವಾಗಿದೆ. ಸುಶಾಂತ್​​ ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಶವಪರೀಕ್ಷೆಯ ವರದಿಯನ್ನು ಸಹ AIIMS ಡಾ. ಸುಧೀರ ಗುಪ್ತಾ ಬದಲಾಯಿಸಿದ ಡಾ. ಸುಧೀರ್ ಗುಪ್ತಾ ಅವರನ್ನು ಕೇಳಿ ಎಂದು ಪ್ರಶ್ನಿಸಿದ್ದಾರೆ.

ಚಿತ್ರರಂಗದಲ್ಲಿ ಅವರ ಹೇಳಿಕೆ ಸದ್ದು ಮಾಡುತ್ತಿದ್ದು, ಅದರ ಸ್ಕ್ರೀನ್​ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಸುಶಾಂತ್ ಸಿಂಗ್ 2020 ಜೂ.14 ರಂದು ಬಾಂದ್ರಾ ಅಪಾಟ್ರ್ಮೆಂಟ್​​​ನ ಕೋಣೆಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅ.2020 ರಲ್ಲಿ AIIMS ವೈದ್ಯಕೀಯ ಮಂಡಳಿಯು ನಟ ಸುಶಾಂತ ಸಾವನ್ನು ಆತ್ಮಹತ್ಯೆ ಎಂದು ರಿಪೋರ್ಟ್​​ ನೀಡಿತ್ತು.

ವರದಿಗಳ ಪ್ರಕಾರ " ಫೋರೆನ್ಸಿಕ್​ನ ಆರು ವೈದ್ಯರ ತಂಡವು ಸುಶಾಂತ ದೇಹದಲ್ಲಿ ವಿಷ ಮತ್ತು ಕತ್ತು ಹಿಸುಕಿದ ಆರೋಪವನ್ನು ತಳ್ಳಿಹಾಕಿದೆ. ಡಾ. ಸುಧೀರ ಗುಪ್ತಾ ಅವರು, ದೇಹದ ಮೇಲೆ ನೇಣು ಹಾಕಿರುವ ಗುರುತು ಬಿಟ್ಟರೇ ಬೇರೆನು ಗಾಯಗಳು ಇಲ್ಲ ಎಂದು ವರದಿ ನೀಡಿದ್ದಾರೆ.