ನ್ಯೂಸ್

ವಸತಿ ನಿಲಯಗಳ ಸೌಕರ್ಯ ಕಲ್ಪಿಸಲು ಎಬಿವಿಪಿ ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ವಿದ್ಯಾಥಿರ್ಗಳ ವೇತನ ಬಿಡುಗಡೆ ಹಾಗೂ ವಸತಿ ನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾಥಿರ್ ಪರಿಷತ್​ (ಎಬಿವಿಪಿ) ನೇತೃತ್ವದಲ್ಲಿ ಬುಧವಾರ ನಗರದ ಬಸ್​ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.

ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾಥಿರ್ಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಅವುಗಳ ಸಮರ್ಪಕ ಅನುಷ್ಠಾನವಾಗದೆ ವಿದ್ಯಾಥಿರ್ಗಳು ತೊಂದರೆ ಅನುಭವಿಸುವಂತಾಗಿದೆ. ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ರಾಜ್ಯ ಸರ್ಕಾರ ವಿದ್ಯಾಥಿರ್ಗಳಿಗೆ ಸರಿಯಾದ ಹಾಸ್ಟೆಲ್​ ವ್ಯವಸ್ಥೆ ಹಾಗೂ ವಿದ್ಯಾಥಿರ್ ವೇತನ ನೀಡದೆ ಅನ್ಯಾಯ ಮಾಡುತ್ತಿದೆ.

ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ 1,258 ಹಾಸ್ಟೆಲ್​ಗಳಿದ್ದು 1,68,833 ವಿದ್ಯಾಥಿರ್ಗಳು ವಸತಿ ನಿಲಯಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ರಾಜ್ಯದಲ್ಲಿ ಹಿಂದಿನ 3 ವರ್ಷಗಳ ಸರ್ಕಾರದ ವರದಿ ಪ್ರಕಾರ ಅಜಿರ್ ಸಲ್ಲಿಸಿದ 100 ವಿದ್ಯಾಥಿರ್ಗಳಲ್ಲಿ 40 ರಿಂದ 50 ವಿದ್ಯಾಥಿರ್ಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಅವಕಾಶ ಸಿಗುತ್ತಿದೆ. ಇನ್ನುಳಿದ ವಿದ್ಯಾಥಿರ್ಗಳು ವಸತಿ ನಿಲಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ವಸತಿ ನಿಲಯಗಳಿಗೆ ಅಜಿರ್ ಸಲ್ಲಿಸಿದ ವಿದ್ಯಾಥಿರ್ಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಹೊಸ ವಸತಿ ನಿಲಯಗಳನ್ನು ಘೋಷಣೆ ಮಾಡಬೇಕು. ಜತೆಗೆ ವಿದ್ಯಾಥಿರ್ಗಳಿಗೆ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಂಟನೆಯ ನಗರ ಸಹಕಾರ್ಯದಶಿರ್ ಯಲ್ಲಮ್ಮ ಆರ್​.ಎಂ., ನವೀನ ಜಿ.ಕೆ., ಸುವಾಸಿನಿ, ಪುನೀತ ದೊಡ್ಡಗೌಡ್ರ, ಅರ್ಜುನ, ಶೃತಿ, ಸುಸ್ಮಿತಾ, ಬಸವರಾಜ ಬನ್ನಿಹಟ್ಟಿ, ಬಸವರಾಜ ಹಾಗೂ ವಿವಿಧ ಕಾಲೇಜ್​ಗಳ ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.