ಬೆಂಗಳೂರು: ಟಾಲಿವುಡ್ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಲಾರ್ ಚಿತ್ರದ ಟೀಸರ್ ಗರುವಾರ ಬಿಡುಗಡೆಗೊಂಡಿದ್ದು, ದಿನದ ಅಂತ್ಯಕ್ಕೆ ಅಧಿಕ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿದೆ.
ಸಲಾರ್ ಭಾಗ 1ರ ಟೀಸರ್ ರಿಲೀಸ್ಗೂ ಮುನ್ನ ಕೆರಳಿಸಿದ ಕುತೂಹಲವನ್ನು ಬಿಡುಗಡೆಯಾದ ಬಳಿಕ ಮತ್ತಷ್ಟು ಹೆಚ್ಚಿಸಿದೆ. ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಷನ್ ಟೀಸರ್ನಲ್ಲಿ ಮೋಡಿ ಮಾಡಿದ್ದು, ಸಿನಿಪ್ರೇಕ್ಷಕರಲ್ಲಿ ಟ್ರೇಲರ್ ಮತ್ತು ಸಿನಿಮಾ ಕುರಿತು ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಏನಿದು ದಾಖಲೆ?: ಸಲಾರ್ ಟೀಸರ್ ಯೂಟ್ಯೂಬ್ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಇದು ಭಾರತದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಪಟ್ಟ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 24 ಗಂಟೆಗಳಲ್ಲಿ 85 ಮಿಲಿಯನ್ ವೀಕ್ಷಣೆಗಳು ಮತ್ತು 1.6 ಮಿಲಿಯನ್ ಲೈಕ್ಗಳು ಟೀಸರ್ಗೆ ಲಭಿಸಿದೆ. ಈ ಹಿಂದೆ ಕೆಜಿಎಫ್-2, ರಾಧೆ ಶ್ಯಾಮ್ ಮತ್ತು ಆದಿಪುರುಷ್ ಸಿನಿಮಾಗಳ ಟೀಸರ್ ಇದೇ ರೀತಿ ಸದ್ದು ಮಾಡಿತ್ತು. ಈ ಪೈಕಿ ಒಟ್ಟು ಮೂರು ಚಿತ್ರಗಳು ಪ್ರಭಾಸ್ ಅವರದ್ದೇ ಆಗಿರುವುದು ಇದೀಗ ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ,(ಏಜೆನ್ಸೀಸ್).