ನ್ಯೂಸ್

ಪ್ರಭಾಸ್​ ಜನ್ಮದಿನದಂದೇ ಹೊರಬಿತ್ತು 'ಸಲಾರ್‌' ರಿಲೀಸ್​ ಡೇಟ್​ ಬಗ್ಗೆ ಹೊಸ ಅಪ್ಡೇಟ್​

ಮೋಹನ್​ ಶೆಟ್ಟಿ

ಮುಂಬೈ: ಇಂದು ತಮ್ಮ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್​ನ ರೆಬೆಲ್​ ಸ್ಟಾರ್​ ನಟ ಪ್ರಭಾಸ್​ಗೆ ಅಭಿಮಾನಿಗಳು ಮತ್ತು ಚಿತ್ರತಂಡದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಪ್ರಭಾಸ್​ ಜನ್ಮದಿನದಂದೇ ಹೊಸ ಪೋಸ್ಟರ್​ ಮೂಲಕ ಶುಭಕೋರಿದ 'ಸಲಾರ್'​ ಚಿತ್ರತಂಡ, ಈ ಹಿಂದೆ ಘೋಷಿಸಿದ್ದ ರಿಲೀಸ್​ ದಿನಾಂಕದ ಬಗ್ಗೆ ಪೋಸ್ಟರ್​ ಮೂಲಕ ಇದೀಗ ಮತ್ತೊಮ್ಮೆ ದೃಢಪಡಿಸಿದೆ.

ನಟ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಾಸ್, ಆಕ್ಷನ್-ಡ್ರಾಮಾ ಸಲಾರ್‌ ರಿಲೀಸ್​ ದಿನಾಂಕದಲ್ಲಿ ಈ ಹಿಂದೆ ಬದಲಾವಣೆ ಕಂಡುಬಂದಿತ್ತು. ಈ ಕುರಿತಂತೆ ಚಿತ್ರತಂಡ ಸಿನಿಮಾ ಸೆ. 28 ರಂದು ಬಿಡುಗಡೆಯಾಗುವುದಿಲ್ಲ ಬದಲಿಗೆ ಡಿಸೆಂಬರ್​ 22 ರಂದು ತೆರೆ ಕಾಣಲಿದೆ ಎಂದು ತಿಳಿಸಿತ್ತು.

ಇದೀಗ ಈ ಸಂಗತಿಯನ್ನು ಮತ್ತೊಮ್ಮೆ ಚಿತ್ರ ತಯಾರಕರು ದೃಢಪಡಿಸಿದ್ದು, ಪ್ರಭಾಸ್​ ಜನ್ಮದಿನಕ್ಕೆ ಶುಭಕೋರುವ ಮುಖೇನ ಚಿತ್ರವು ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಚಿತ್ರದಲ್ಲಿ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).