ನ್ಯೂಸ್

ರಿಲೀಸ್​​ಗೂ ಮುನ್ನವೇ ದಾಖಲೆ ಸೃಷ್ಟಿಸಿದ ಪ್ರಭಾಸ್ ನಟನೆಯ ಸಲಾರ್!

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಟಾಲಿವುಡ್ ಸ್ಟಾರ್, ನಟ ಡಾರ್ಲಿಂಗ್ ಪ್ರಭಾಸ್​​ ನಟನೆಯ ಬಹುನಿರೀಕ್ಷಿತ 'ಸಲಾರ್' ಚಿತ್ರ ಇದೀಗ ಬಿಡುಗಡೆಗೂ ಮುನ್ನವೇ ಮತ್ತೊಂದು ದಾಖಲೆಯನ್ನು ಬರೆದಿದೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್​ ಮತ್ತು ಬಾಹುಬಲಿ ಪ್ರಭಾಸ್​​ ಜೋಡಿಗೆ ಅಭಿಮಾನಿಗಳು ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಅಮೆರಿಕಾ ವಿತರಕ ಪ್ರತ್ಯಂಗಿರಾ ಸಿನಿಮಾಸ್ ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ, ಉತ್ತರ ಅಮೇರಿಕಾದಲ್ಲಿ 1,980ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಲಾರ್ ಬಿಡುಗಡೆಯಾಗಲಿದೆ ಎಂಬ ಅಚ್ಚರಿ ಮಾಹಿತಿಯೊಂದನ್ನು ಪ್ರಕಟಿಸಿದೆ. ಇಲ್ಲಿಯವರೆಗೂ ಬಿಡುಗಡೆಯಾದ ಯಾವುದೇ ಭಾರತೀಯ ಚಲನಚಿತ್ರಕ್ಕೂ ಇಷ್ಟು ಸ್ಥಳಗಳು ಲಭಿಸಿಲ್ಲ, ಸಲಾರ್​​ ಚಿತ್ರವೇ ಪ್ರಥಮ ಎಂದು ಹೇಳಲಾಗಿದೆ. ಚಿತ್ರತಂಡದ ಮಾಹಿತಿ ಪ್ರಕಾರ, ಸಲಾರ್​​ ಇದೇ ಸೆಪ್ಟೆಂಬರ್ 27, 2023 ರಂದು ಜಾಗತೀಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ಪ್ರಭಾಸ್​​ಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್ ಸೇರಿದಂತೆ ದೊಡ್ಡ ತಾರ ಬಳಗವೇ ಸಿನಿಮಾದಲ್ಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).