ಬೆಂಗಳೂರು: ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ನ ರೆಬೆಲ್ ಸ್ಟಾರ್, ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷ್ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ಸಲಾರ್' ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಸಾಕಷ್ಟು ನಿರೀಕ್ಷೆಗಳು ಹೆಚ್ಚುತ್ತಿದೆ.
ಈ ಮಧ್ಯೆ ಬಾಲಿವುಡ್ ನಟ ಶಾರೂಖ್ ಖಾನ್ ಅಭಿನಯದ 'ಡಂಕಿ' ಕೂಡ 'ಸಲಾರ್' ರಿಲೀಸ್ ದಿನವೇ ಬಿಡುಗಡೆಗೆ ಸಜ್ಜಾಗಿದ್ದು, ಭಾರತೀಯ ಚಿತ್ರರಂಗದ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಭಾರೀ ಪೈಪೋಟಿಗೆ ಕಾರಣವಾಗಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಸಿನಿ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಬೆಂಗಳೂರಿನಲ್ಲಿ 'ಸಲಾರ್' ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ವೇಗವಾಗಿ ಸಾಗುತ್ತಿದೆ. ಸಿನಿಮಾ ಕುರಿತಂತೆ ಹೊಸ ಅಪ್ಡೇಟ್ಗೆ ಕಾತರದಿಂದ ಕಾಯುತ್ತಿರುವ ಪ್ರಭಾಸ್ ಫ್ಯಾನ್ಸ್ಗೆ ಹೊಸ ಮಾಹಿತಿಯೊಂದು ಲಭಿಸಿದೆ.
ಇತ್ತೀಚಿನ ವರದಿಯ ಪ್ರಕಾರ, ಚಿತ್ರ ತಯಾರಕರು ಮುಂಬರುವ ದಿನಗಳಲ್ಲಿ ಕೆಲವು ವಿಶಿಷ್ಟ ಪ್ರಚಾರ ಅಭಿಯಾನಗಳನ್ನು ಯೋಜಿಸಿದ್ದಾರೆ. ಟ್ರೇಲರ್ ಲಾಂಚ್ ಕೂಡ ವಿಶೇಷ ರೀತಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಶಾರುಖ್ ಖಾನ್ ಅವರ 'ಡಂಕಿ' ಚಿತ್ರದೊಂದಿಗೆ 'ಸಲಾರ್' ಬಿಡುಗಡೆಯಾಗುತ್ತಿರುವ ಹಿನ್ನೆಲೆ ಭಾರೀ ಪೈಪೋಟಿ ಎದುರಾಗುವುದು ಖಚಿತ. ಹೀಗಾಗಿ ಚಿತ್ರದ ತಯಾರಕರು ಪ್ರಮುಖ ಮತ್ತು ಘನ ಪ್ರಚಾರಗಳನ್ನು ಕೈಗೊಳ್ಳಲು ಹೆಚ್ಚು ಒತ್ತು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಒಂದಷ್ಟು ಕುತೂಹಲಕಾರಿ ಕಾರ್ಯಕ್ರಮಗಳು ನಡೆಯಲಿದ್ದು, ಸಖತ್ ಪೋಸ್ಟರ್ ಹಾಗೂ ಟ್ರೇಲರ್ಗೂ ಮುನ್ನ ಕಿರು ಟೀಸರ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ,(ಏಜೆನ್ಸೀಸ್).