Commonwealth Games: ಈಜು ಫೈನಲ್ಗೇರಿದ ಸಾಜನ್ ಪ್ರಕಾಶ್, ಸಾತ್ವಿಕ್ ಪಾಟೀಲ್
ಗ್ಲಾಸ್ಗೋ: ಎರಡು ಬಾರಿಯ ಒಲಿಂಪಿಯನ್ ಸಾಜನ್ ಪ್ರಕಾಶ್ ಕಾಮನ್ವೆಲ್ತ್ ಗೇಮ್ಸ್ (Commonwealth Games) ಈಜು ಸ್ಪರ್ಧೆಯಲ್ಲಿ ಪುರುಷರ 200 ಮೀ. ಬಟರ್ಫ್ಲೈ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದರು. ಸೋಮವಾರ ನಡೆದ ಸ್ಪರ್ಧೆಯಲ್ಲಿ ಅವರು 1 ನಿಮಿಷ, 58.59 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಹೀಟ್ಸ್ನಲ್ಲಿ 2ನೇ ಮತ್ತು ಒಟ್ಟಾರೆ 6ನೇ ಸ್ಥಾನ ಪಡೆದರು. 32 ವರ್ಷದ ಸಾಜನ್ ಪ್ರಕಾಶ್, 1 ನಿಮಿಷ, 57.09 ಸೆಕೆಂಡ್ಗಳಲ್ಲಿ ಈ ಸ್ಪರ್ಧೆ ಮುಗಿಸಿದ ವೈಯಕ್ತಿಕ ಶ್ರೇಷ್ಠ ದಾಖಲೆಯನ್ನು ಹೊಂದಿದ್ದಾರೆ.
ಪುರುಷರ 100 ಮೀ. ಬ್ರೆಸ್ಟ್ಸ್ಟ್ರೊಕ್ ಎಸ್ಬಿ9 ವಿಭಾಗದಲ್ಲಿ ಕರ್ನಾಟಕದ ಸಾತ್ವಿಕ್ ಪಾಟೀಲ್ 1 ನಿಮಿಷ, 15.85 ಸೆಕೆಂಡ್ಗಳಲ್ಲಿ ಈಜಿ 6ನೇ ಸ್ಥಾನಿಯಾಗಿ ಫೈನಲ್ಗೇರಿದರು
ಪುರುಷರ 4/200 ಮೀ. ರಿಲೇ ಫ್ರೀಸ್ಟೈಲ್ ವಿಭಾಗದ ಫೈನಲ್ನಲ್ಲಿ ಭಾರತ ತಂಡ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಕನ್ನಡಿಗರಾದ ಶ್ರೀಹರಿ ನಟರಾಜ್, ಅನೀಶ್ ಗೌಡ ಮತ್ತು ದಕ್ಷಿಣ್ ಶಶಿಕುಮಾರ್ ಒಳಗೊಂಡ ಭಾರತ ತಂಡ 7 ನಿಮಿಷ, 29.84 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿತು. ಆಸ್ಟ್ರೆಲಿಯಾ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಇಂಗ್ಲೆಂಡ್ ಬೆಳ್ಳಿ ಮತ್ತು ವೇಲ್ಸ್ ಕಂಚು ಗಳಿಸಿತು.