ನ್ಯೂಸ್

ಸೈಯಾರ ಸಿನಿಮಾ ಎಫೆಕ್ಟ್​: ರಸ್ತೆ ಮಧ್ಯೆದಲ್ಲೇ ಜೋಡಿ ನೃತ್ಯ ಮಾಡಿದ ಬೈಕ್​ಗಳು! ವಿಡಿಯೋ ವೈರಲ್​..|Bikes

Bikes: ಜೈಪುರದ ಮಾನಸ ಸರೋವರ ಪ್ರದೇಶದಲ್ಲಿ ಎರಡು ಬೈಕುಗಳು ಜನನಿಬಿಡ ರಸ್ತೆಯ ಮಧ್ಯದಲ್ಲಿ ಜೋಡಿ ನೃತ್ಯದಲ್ಲಿ ತೊಡಗಿಕೊಂಡಿದ್ದು, ಇಬ್ಬರು ಪುರುಷರು ತಮ್ಮ ಕೈಯಲ್ಲಿ ಕೋಲು ಹಿಡಿದು ಅವುಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.

ಈ ದೃಶ್ಯವು ಕಾಲ್ಪಾನಿಕವಾಗಿ ಇಂಟರ್ನೆಟ್​ನಲ್ಲಿ ಕಾಣಿಸಿಕೊಳ್ಳುವಂತೆ ನಿಜವಾಗಿ ರಸ್ತೆಯ ಮಧ್ಯೆದಲ್ಲಿ ಕಂಡುಬಂದಿದೆ. ಇದು ಜೋಡಿ ನೃತ್ಯವಲ್ಲದಿರಬಹುದು ಆದರೆ, ಈ ಬೈಕುಗಳು ಪ್ರದರ್ಶನ ನೀಡಲು ಸಜ್ಜಾಗಿದೆ ಎಂದು ತೋರುತ್ತದೆ. ಅದು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ತೊಂದರೆ ಮಾಡಿದೆ.

ವಿಡಿಯೋದಲ್ಲೇನಿದೆ?

@jaipurkajalwa ಎಂಬ ಇನ್​ಸ್ಟಾಗ್ರಾಮ್​ ಬಳಕೆದಾರ ತನ್ನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಇನ್ನು ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಹಲವಾರು ಪ್ರಯಾಣಿಕರು ರಸ್ತೆಯಿಂದ ಮುಂದೆ ಹೋಗಲು ಕಾಯುತ್ತಿರುವುದನ್ನು ಗಮನಿಸಬಹುದು. ಆದರೆ, ಅಲ್ಲಿ ಬೈಕ್​ ಸವಾರರು ಯಾರು ಎಂಬುದು ತಿಳಿಯುತ್ತಿಲ್ಲ. ಇಲ್ಲಿ ಬೈಕ್​ಗಳನ್ನು ಸಾಹಸ ಮಾಡಲು ಹೊಂದಿಸಿದಂತೆ ತೋರುತ್ತಿದ್ದು, ಪ್ರಯಾಣಿಕರಿಗೆ ಸಂಚಾರ ನಡೆಸಲು ಕಷ್ಟವಾಗಿದೆ. ಸಾಹಸವು ದೀರ್ಘಕಾಲದವರೆಗೆ ಮುಂದುವರೆದಿದ್ದು, ಇಬ್ಬರು ಯುವಕರು ಕೋಲುಗಳನ್ನು ಹಿಡಿದು ಬೈಕ್​ಗಳ ಸಾಹಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಇನ್ನು ಕೆಲವು ಗಂಟೆಗಳ ನಂತರ ಸಾಹಸ ನಿಂತಿದ್ದು, ಮೊದಲಿನ ರೀತಿಯಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ಚಲಿಸಲಾರಂಭಿಸಿದರು.

ಈ ಘಟನೆಯ ಬಗ್ಗೆ ಬೈಕುಗಳ ಮಾಲೀಕ ಯಾರು? ಮಧ್ಯ ರಸ್ತೆಯಲ್ಲಿ ಈ ರೀತಿ ಮಾಡಿದ್ದು ಯಾರು ಎಂಬುದು ಇಲ್ಲಿಯವರೆಗೂ ತಿಳಿದಿಲ್ಲ.

ನೆಟ್ಟಿಗರ ಪ್ರತಿಕ್ರಿಯೆ

ಈ ದೃಶ್ಯ ವೈರಲ್​ ಆಗುತ್ತಿದ್ದಂತೆಯೇ ನೆಟಿಜನ್​ಗಳು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಇನ್​ಸ್ಟಾಗ್ರಾಮ್​ ಬಳಕೆದಾರ ಬೈಕ್​ಗಳು ಪ್ರಣಯ ಕ್ಷಣದಲ್ಲಿ ತೊಡಗಿರುವ ಪ್ರೇಮಿಗಳಂತೆ ಕಾಣುತ್ತಿವೆ. ಇದು ಸೈಯಾರ ಚಿತ್ರದ ಅಡ್ಡ ಪರಿಣಾಮಗಳಿರಬಹುದು ಎಂದು ಪ್ರತಿಕ್ರಿಯಿಸಿದ್ದಾನೆ. (ಏಜೆನ್ಸೀಸ್​)