ಕಾರ್ಗಲ್‌ನ ಕೆಪಿಸಿ ಸಭಾಂಗಣದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಎಚ್.ಮಂಜುನಾಥ್, ಎಚ್.ಆರ್.ರಮೇಶ್, ಜಿ.ಇ.ಮೋಹನ್, ಆರ್.ಶಿವಕುಮಾರ್, ಪೂರ್ಣಿಮಾ ಗಿಡ್ಡಪ್ಪ ಗೌಡ ಇದ್ದರು.  
ನ್ಯೂಸ್

ಭಕ್ತಿ, ಬದುಕಿನ ಮಾರ್ಗ ಕಲಿಸಿದ ಸಂತ ಕನಕ

ಕಾರ್ಗಲ್: ಭಕ್ತಿ ಮಾರ್ಗದ ಜತೆಗೆ ಬದುಕುವ ಮಾರ್ಗವನ್ನು ಸಮಾಜಕ್ಕೆ ತೋರಿಸಿಕೊಟ್ಟ ಶ್ರೇಷ್ಠ ಸಂತ ಭಕ್ತ ಕನಕದಾಸ ಎಂದು ಕೆಪಿಸಿ ಎಂಪ್ಲಾಯಿಸ್ ಯೂನಿಯನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ. ವೀರೇಂದ್ರ ಗೌಡ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮದಿಂದ ಇಲ್ಲಿನ ಕೆಪಿಸಿ ಅಫಿಷಿಯಲ್ಸ್ ರಿಕ್ರಿಯೇಶನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿದ್ದ ಸಾಕಷ್ಟು ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಲೋಕ ಸಂಚಾರದ ಮೂಲಕ ಕನಕದಾಸರು ಶ್ರಮಿಸಿರುವುದು ವಿಶೇಷ. ಕನಕದಾಸರು ವಿಜಯನಗರ ಸಾಮ್ರಾಜ್ಯದ ಸೇನಾ ದಂಡನಾಯಕನಾಗಿದ್ದರು. ಕತ್ತಿ ಹಿಡಿಯುವ ಕೈಯಲ್ಲಿ ತಂಬೂರಿ ಹಿಡಿದು ಭಕ್ತಿ ಜತೆಗೆ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು ಎಂದು ಹೇಳಿದರು.

ಜೋಗ ಕೆವಿನಿನಿ ಕಾಲೇಜು ಪ್ರಾಚಾರ್ಯ ಎಚ್.ಮಂಜುನಾಥ್ ಉಪನ್ಯಾಸ ನೀಡಿದರು. ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಅಭಿಯಂತ ಎಚ್.ಆರ್.ರಮೇಶ್, ಕಾಮಗಾರಿ ವಿಭಾಗದ ಮುಖ್ಯ ಅಭಿಯಂತ ಜಿ.ಇ.ಮೋಹನ್, ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್, ಸಿಬ್ಬಂದಿ ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪ ಗೌಡ, ಬಸವರಾಜ್, ನಾಗಭೂಷಣ್, ಕೇಶವೇಗೌಡ, ರಾಮಚಂದ್ರ, ನಂದನ್ ಇತರರಿದ್ದರು.