ಮುಂಬೈ: ( Saif Ali Khan net worth ) ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ವಾಸವವಾಗಿದ್ದ ಬಾಂದ್ರಾ ವೆಸ್ಟ್ ಮನೆಯಲ್ಲಿ ಜನವರಿ 16 ರ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದೊಡ್ಡ ಅಪಘಾತ ಸಂಭವಿಸಿದೆ. ಅಪರಿಚಿತ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಸದ್ಯ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ನೆಟ್ಟಿಗರು ಸೈಫ್ ಮನೆ ಹಾಗೂ ಆಸ್ತಿ ಕುರಿತಾಗಿ ಸರ್ಚ್ ಮಾಡುತ್ತಿದ್ದಾರೆ.
ಸೈಫ್ ಅಲಿ ಖಾನ್ ಶ್ರೀಮಂತ ಕುಟುಂಬದವರು. ಅವರ ತಂದೆ ಮನ್ಸೂರ್ ಅಲಿ ಖಾನ್ ಕ್ರಿಕೆಟರ್. ಅವರ ತಾಯಿ ಶರ್ಮಿಳಾ ಟಾಗೋರ್ ನಟಿ. ಹೀಗಾಗಿ, ಅಮೆರಿಕದಲ್ಲಿ ಸೈಫ್ ಉನ್ನತ ಶಿಕ್ಷಣ ಪಡೆದರು. ಸದ್ಯ ಅವರು ಕರೀನಾನ ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು ಬಾಂದ್ರಾ ಮನೆಯಲ್ಲಿ ವಾಸವಾಗಿದ್ದಾರೆ.
ನಟ ಸೈಫ್ ಅಲಿ ಖಾನ್ ಅವರು ವಾಸವಾಗಿರೋದು ಮುಂಬೈನ ಬ್ರಾಂದಾದಲ್ಲಿ. ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಸೈಫ್ ಅಲಿ ಖಾನ್ ದಂಪತಿ ವಾಸವಾಗಿದ್ದಾರೆ. ಸೈಫ್ ಅಲಿ ಖಾನ್ ಮನೆ ಬರೋಬ್ಬರಿ 10 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.
ಸೈಫ್ ಅಲಿ ಖಾನ್ ಆಸ್ತಿ 1200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕರೀನಾ ಕಪೂರ್ ಆಸ್ತಿ 485 ಕೋಟಿ ರೂಪಾಯಿ. ಅಂದರೆ ಇಬ್ಬರ ಆಸ್ತಿ ಸೇರಿದರೆ 1685 ಕೋಟಿ ರೂಪಾಯಿ ಆಗಲಿದೆ. ಇಬ್ಬರೂ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ.
ಸೈಫ್ ಅಲಿ ಖಾನ್ ಅವರ ಹೆಸರಲ್ಲಿ ಪಟೌಡಿ ಪ್ಯಾಲೇಸ್ ಇದೆ. ಇದನ್ನು 1935ರಲ್ಲಿ ನಿರ್ಮಿಸಲಾಯಿತು. ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಸಾವಿನ ಬಳಿಕ ಇದು ಸೈಫ್ ಹೆಸರಿಗೆ ಬಂತು. 10 ಎಕರೆಯಲ್ಲಿ ಇರುವ ಈ ಕಟ್ಟಡ 150 ರೂಂಗಳನ್ನು ಹೊಂದಿದೆ. ಇದರಲ್ಲಿ ಸಿನಿಮಾ ಶೂಟ್ ಕೂಡ ನಡೆಯುತ್ತದೆ. ಇದರ ಬೆಲೆ ನೂರಾರು ಕೋಟಿ ರೂಪಾಯಿ.
ಸೈಫ್ ಅಲಿ ಖಾನ್ ಅವರು ಎರಡು ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ‘ಇಲ್ಲುಮಿನಾಟಿ ಫಿಲ್ಮ್ಸ್’ ಹಾಗೂ ‘ಬ್ಲಾಕ್ ನೈಟ್’ ಎಂದು ಹೆಸರನ್ನು ಇಡಲಾಗಿದೆ. ಇದರ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಆಗುತ್ತದೆ. ಇವರು ಮಿಂತ್ರಾ ಜೊತೆ ಕೈ ಜೋಡಿಸಿ ‘ಹೌಸ್ ಆಫ್ ಪಟೌಡಿ’ ಎಂಬ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ.
ಸೈಫ್ ಅವರು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನಲ್ಲಿ ‘ಟೈಗರ್ಸ್ ಆಫ್ ಕೊಲ್ಕತ್ತ’ ತಂಡದವನ್ನು ಹೊಂದಿದ್ದಾರೆ. ಸೈಫ್ ಬಳಿ ಮರ್ಸೀಡಿಸ್ ಬೆಂಜ್ ಎಸ್ ಕ್ಲಾಸ್ ಎಸ್ 350ಡಿ (1.71 ಕೋಟಿ ರೂಪಾಯಿ), ಲ್ಯಾಂಡ್ ರೋವರ್ ಡಿಫೆಂಡರ್ 110 (2.30 ಕೋಟಿ ರೂಪಾಯಿ), ಆಡಿ ಕ್ಯೂ 7 (95 ಲಕ್ಷ) ಹೀಗೆ ಹಲವು ಕಾರುಗಳು ಇವೆ.
2023 ರ ವರದಿಯ ಪ್ರಕಾರ.. ಸೈಫ್ ವಾರ್ಷಿಕವಾಗಿ ರೂ. 30 ಕೋಟಿ ಗಳಿಸುತ್ತಿದೆಯಂತೆ. ಸರಾಸರಿ ರೂ. 15 ಕೋಟಿಗೂ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದಾರೆ. ಜಾಹೀರಾತುಗಳ ಮೂಲಕವೂ ಸರಾಸರಿ ರೂ. 1-5 ಕೋಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮತ್ತು ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಸಂಭಾವನೆಯನ್ನು 70 ಪ್ರತಿಶತಕ್ಕೆ ಹೆಚ್ಚಿಸಿದ್ದಾರೆ. ಸೈಫ್ ಅಲಿ ಖಾನ್ ಇಲ್ಯುಮಿನಾಟಿ ಫಿಲ್ಮ್ಸ್ ಮತ್ತು ಬ್ಲ್ಯಾಕ್ ನೈಟ್ ಫಿಲ್ಮ್ಸ್ ಎಂಬ ಎರಡು ನಿರ್ಮಾಣ ಕಂಪನಿಗಳನ್ನು ಹೊಂದಿದ್ದಾರೆ. ಬಟ್ಟೆ ಬ್ರ್ಯಾಂಡ್ Myntra ಜೊತೆ ಪಾಲುದಾರಿಕೆ. ನಂತರ ಅವರು ಅದನ್ನು ಸುಗಂಧ ದ್ರವ್ಯಗಳು, ಪಾದರಕ್ಷೆಗಳು ಮತ್ತು ಗೃಹಾಲಂಕಾರಗಳಂತಹ ಕ್ಷೇತ್ರಗಳಿಗೆ ವಿಸ್ತರಿಸಿದರು.
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ನಲ್ಲಿ ಈ ದಂಪತಿಗಳು ಟೈಗರ್ಸ್ ಆಫ್ ಕೋಲ್ಕತ್ತಾವನ್ನು ಸಹ-ಸ್ಥಾಪಿಸಿದರು. ಸೈಫ್ ರಾಯಲ್. ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಸೈಫ್ ಬಳಿ ಐಷಾರಾಮಿ ಕಾರು ಸಂಗ್ರಹವಿದೆ. ಸುಮಾರು ರೂ. 1.71 ಕೋಟಿ, Mercedes Benz S350, Audi Q7 (85-95 ಲಕ್ಷ ರೂ.) ಮತ್ತು ಜೀಪ್ ರಾಂಗ್ಲರ್ (ರೂ. 62-66 ಲಕ್ಷ), GQ ಇಂಡಿಯಾ ತಿಳಿಸಿದೆ.