ನ್ಯೂಸ್

ಆಟೋ ಚಾಲಕ ಭಜನ್​ಸಿಂಗ್​​ ರಾಣಾ ಭೇಟಿಯಾದ ಸೈಫ್​ ಅಲಿ ಖಾನ್​: ಡ್ರೈವರ್​ ಬಗ್ಗೆ ನಟ ಹೇಳಿದ್ದೇನು? | Saif Ali Khan

ಮುಂಬೈ: ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ಸೈಫ್​​ ಅಲಿ ಖಾನ್(Saif Ali Khan)​​ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಹಲ್ಲೆಯ ಸಮಯದಲ್ಲಿ(ತುರ್ತು ಸಂದರ್ಭ) ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯಕನಾದ ಆಟೋ ಚಾಲಕ ಭಜನ್​ಸಿಂಗ್​​ ರಾಣಾ ಅವರನ್ನು ಸೈಫ್​ ಭೇಟಿಯಾಗಿ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ವಾರದ ಬಾಂದ್ರದ ಮನೆಯಲ್ಲಿ ಸೈಫ್​​ಗೆ ಚಾಕು ಇರಿತದ ಬಳಿಕ ಲೀಲಾವತಿ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಿ ದಾಖಲಿಸಲಾಗಿತ್ತು. ಈ ವೇಳೆ ಆಟೋ ಚಾಲಕ ಭಜನ್​ಸಿಂಗ್​​ ರಾಣಾ ಸಹಾಯ ಮರೆಯುವಂತಿಲ್ಲ. ಚಾಲಕ ಸಹಾಯದ ಸಾಲು ಸಾಲು ವರದಿಗಳು ಸುದ್ದಿಯಾಗಿದ್ದವು. ಇದೀಗ ಸೈಫ್​​ ಚಾಲಕ ಮತ್ತು ಚಾಲಕನ ಕುಟುಂಬಸ್ಥರಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತು ಯೋಗೇಂದ್ರ ಶರ್ಮಾ ಎಂಬುವವರು ಸೈಫ್​​ ಚಾಲಕನನ್ನು ಭೇಟಿಯಾದ ಕೆಲ ಫೊಟೋಗಳನ್ನು ಹಂಚಿಕೊಂಡಿದ್ದಾರೆ.

ಸೈಫ್​ ಅಲಿಖಾನ್​ ಚಾಲಕ ಭಜನ್​ಸಿಂಗ್​​ ರಾಣಾ ಅವರನ್ನು ಆಸ್ಪತ್ರೆಯಲ್ಲಿಯೇ ಭೇಟಿಯಾಗಿದ್ದಾರೆ. ಈ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿವೆ. ಸೈಫ್​​ ಭಜನ್​ಸಿಂಗ್​​ ರಾಣಾ ಮೈಮೇಲೆ ಕೈ ಹಾಕಿದ್ದಾರೆ. ಅಲ್ಲದೆ, ಕುಟುಂಬಕ್ಕೂ ಮತ್ತು ನಿಮಗೂ ದೊಡ್ಡ ಧನ್ಯವಾದಗಳು ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

ಪ್ರಕರಣದ ಹಿನ್ನೆಲೆ..

ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಜ.16ರಂದು ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆನ್‌ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ.

ಆರೋಪಿಯನ್ನು ಶರಿಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದ ನಿವಾಸಿ. ಅಷ್ಟೇ ಅಲ್ಲ, ಆತ ಬಾಂಗ್ಲಾದೇಶದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ಕೂಡ ಹೌದು. ಕಳೆದ ಬುಧವಾರ ಮಧ್ಯರಾತ್ರಿ ಸೈಫ್ ಮನೆಗೆ ನುಗ್ಗಿದ್ದ. ಸೈಫ್- ಕರೀನಾ ಅವರ ಕಿರಿಯ ಮಗನನ್ನು ಕಿಡ್ನಾಪ್ ಮಾಡಲು ಮನೆಗೆ ನುಗ್ಗಿದ್ದಾಗಿ ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ. ಕಿಡ್ನಾಪ್ ಮಾಡಿ ಒಂದು ಕೋಟಿ ರೂಪಾಯಿ ಬೇಡಿಕೆ ಇಡುವುದು ಖದೀಮ ಉದ್ದೇಶವಾಗಿತ್ತು. ಈ ವೇಳೆ ಸೈಫ್ ಮಗನನ್ನು ಕಾಪಾಡಿದರು. ಆದರೆ, ಖದೀಮ ಮಾತ್ರ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದ.(ಏಜೆನ್ಸೀಸ್​)