ನ್ಯೂಸ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು

ಮುಂಬೈ: ತಮ್ಮ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ ನಟ ಸೈಫ್​ ಅಲಿಖಾನ್ ಸೋಮವಾರ (ಇಂದು​) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್​ ಸ್ಟಾರ್ ನಟ ಸೈಫ್ ಅಲಿಖಾನ್ ಅವರು ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೊಣಕಾಲು ಗಾಯದಿಂದ ಬಳಲುತ್ತಿರುವ ಸೈಫ್ ಅಲಿ ಖಾನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಸೈಫ್ ಮೊಣಕಾಲಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎನ್ನಲಾಗಿದೆ. ಆದರೂ ನಟ ಸೈಫ್ ಕುಟುಂಬ ಈ ಕುರಿತು ಯಾವುದೇ ಲಭ್ಯವಾಗಿಲ್ಲ. ಈ ಸುದ್ದಿಯಿಂದ ಸೈಫ್ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ.

ಸೈಫ್ ಅಲಿ ಖಾನ್ ಹೇಗೆ ಗಾಯಗೊಂಡರು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆಸ್ಪತ್ರೆಯಲ್ಲಿ ಸೈಫ್ ಜೊತೆ ಅವರ ಪತ್ನಿ ಕರೀನಾ ಕಪೂರ್ ಖಾನ್ ಕೂಡ ಇದ್ದಾರೆ. ಈ ಸುದ್ದಿಯ ನಂತರ, ಸೈಫ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದಾರೆ.

ಕರೀನಾ ಕಪೂರ್ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಗಾಯದ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಸೈಫ್ ಅಲಿ ಖಾನ್ ಪ್ರಸ್ತುತ ಸೌತ್ ಚಿತ್ರ ‘ದೇವರ’ದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಬಹುಬೇಡಿಕೆ ಆರ್​ಆರ್​ಆರ್ ಸಿನಿಮಾ ನಟ ರಾಮ್ ಚರಣ್ ಸಂದರ್ಶನವೊಂದರಲ್ಲಿ ಯಾರೂ ನಿರೀಕ್ಷಿಸದ ಹೆಸರನ್ನು ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆರ್​​ಆರ್​ಆರ್​ ಸ್ಟಾರ್ ಕೊಟ್ಟಿದ್ದು, ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಹೆಸರನ್ನು. ಹೌದು, ಅವರ ಫ್ಯಾಷನ್ ಸೆನ್ಸ್ ಮತ್ತು ಸ್ಟೈಲ್ ನನಗೆ ಇಷ್ಟವಾಗಿದೆ ಎಂದು ರಾಮ್​​ ಚರಣ್​​ ತಿಳಿಸಿದ್ದಾರೆ. ಸೈಫ್‌ ಅವರಲ್ಲಿ ರಾಜಮನೆತನದ ಠೀವಿ ಮತ್ತು ವರ್ಚಸ್ಸು ಇದೆ. ಅವರು ಯಾವುದನ್ನು ಆಡಂಬರ ಮಾಡುವುದಿಲ್ಲ. ಅವರು ಬಹಳ ಸರಳ ಎಂದು ರಾಮ್​​ ಚರಣ್ ತಿಳಿಸಿದ್ದರು.