ನ್ಯೂಸ್

ಅಮಿರ್​ ಖಾನ್​ ಮಗನ ಜತೆ ಸಾಯಿಪಲ್ಲವಿ ಚೆಲ್ಲಾಟ.. ತುಂಟಾಟ; ಏನಿದರ ಅಸಲಿಯತ್ತು?

ಮುಂಬೈ: ನಟಿ ಸಾಯಿ ಪಲ್ಲವಿ ಅವರು ಅಮೀರ್ ಖಾನ್  ಪುತ್ರ ಜುನೈದ್ ಜತೆ ಜಪಾನ್‌ನಲ್ಲಿ ಸುತ್ತಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದ ತುಂಬಾ ವೈರಲ್​ ಆಗುತ್ತಿವೆ.

ಸಾಯಿ ಪಲ್ಲವಿ ಮತ್ತು ಅಮೀರ್ ಖಾನ್ ಅವರ ಪುತ್ರ ಜುನೈದ್ ಜಪಾನ್‌ನಲ್ಲಿದ್ದಾರೆ. ಈ ಚಿತ್ರಗಳು ವೈರಲ್ ಆಗಿವೆ. ಸಪ್ಪೊರೊ ಸ್ನೋ ಫೆಸ್ಟಿವಲ್‌ನಲ್ಲಿ ಇಬ್ಬರು ತಮ್ಮ ಮುಂಬರುವ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಚಿತ್ರ ತಂಡ ಜತೆ ಸಾಯಿ ಪಲ್ಲವಿ ಮತ್ತು ಅಮೀರ್ ಖಾನ್ ಅವರ ಪುತ್ರ ಜುನೈದ್ ಜಪಾನ್​ಗೆ ತೆರಳಿದ್ದಾರೆ. ಸಿನಿಮಾ ಶೂಟಿಂಗ್​ ನಡೆಯುತ್ತಿದ್ದೆ. ಈ ವೇಳೆ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ವೈರಲ್ ಚಿತ್ರಗಳಲ್ಲಿ ಒಂದರಲ್ಲಿ, ಇಬ್ಬರ ಜತೆ ಸೆಲ್ಫಿಗಾಗಿ ಅಭಿಮಾನಿಗಳೊಂದಿಗೆ ಪೋಸ್ ನೀಡುವುದನ್ನು ಕಾಣಬಹುದು. ಜಪಾನ್‌ನ ಅಂಗಡಿಯೊಂದರಲ್ಲಿ ಇಬ್ಬರು ಅಭಿಮಾನಿಗಳೊಂದಿಗೆ ಪೋಸ್ ನೀಡುತ್ತಿರುವ ಫೋಟೋಗಳನ್ನು ನೋಡಬಹುದಾಗಿದೆ.

ಸಾಯಿ ಪಲ್ಲವಿ ಮತ್ತು ಅಮೀರ್ ಖಾನ್ ಅವರ ಮಗ ಜುನೈದ್ ಜಪಾನ್‌ನಲ್ಲಿ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾರೆ. ಅವರ ಹೆಸರಿಡದ ಮುಂದಿನ ಚಿತ್ರವನ್ನು 'ಹಿಚ್ಕಿ' ಖ್ಯಾತಿಯ ಸಿದ್ಧಾರ್ಥ್ ಪಿ ಮಲ್ಹೋತ್ರಾ ನಿರ್ದೇಶಿಸಿದ್ದಾರೆ. ಹೆಸರಿಡದ ಮುಂದಿನ ಚಿತ್ರದಲ್ಲಿ ಜುನೈದ್ ಸಾಯಿ ಪಲ್ಲವಿ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ.

ಅಮೀರ್​ ಖಾನ್​ ಅವರ ಪುತ್ರ ಜುನೈದ್ ಅವರ ಚೊಚ್ಚಲ ಚಿತ್ರ 'ಮಹಾರಾಜ' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಯೋಜನೆಯಲ್ಲಿ ಜೈದೀಪ್ ಅಹ್ಲಾವತ್, ಶರ್ವರಿ ವಾಘ್ ಮತ್ತು ಶಾಲಿನಿ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.