Sarika Rao 
ನ್ಯೂಸ್

Sarika Rao - ಮೃತ್ಯುದೇವತೆ ಅವತಾರದಲ್ಲಿ ಸಹಾರ ಸುಂದರಿ ಸಾರಿಕಾ ರಾವ್

"ಬಡ್ಡಿಮಗನ್​ ಲೈು' "ಅನಾವರಣ', ಮಹಿಳಾ ಪ್ರಧಾನ ಸ್ಪೋರ್ಟ್ಸ್​ ಡ್ರಾಮಾ "ಸಹಾರ', ತುಳು ಭಾಷೆಯ "ಲವ್​ ಕಾಕ್ಟೇಲ್​', "ಪೊಲೀಸ್​ ಫೈ​ಲ್ಸ್​' ವೆಬ್​ಸರಣಿ ಸೇರಿ ಕೆಲ ಚಿತ್ರಗಳಲ್ಲಿ ಮಿಂಚಿರುವ ಹೆಗ್ಗಳಿಕೆ ನಟಿ ಸಾರಿಕಾ ರಾವ್​ಗೆ ಸಲ್ಲುತ್ತದೆ. "ಸಹಾರ' ಬಳಿಕ ಮಹಿಳಾ ಪ್ರಧಾನ ಚಿತ್ರಗಳತ್ತ ಗಮನ ಹರಿಸಿರುವ ಅವರು, ಇದೀಗ "ಮೃತ್ಯುದೇವತೆ'ಯಾಗಿ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. "ಜಾಲತಾಣದಲ್ಲಿ ೋಟೋಗಳನ್ನು ನೋಡಿ ನಿರ್ದೇಶಕ ನವೀನ್​ ಮಹದೇವ್​ ಸಂಪರ್ಕಿಸಿದರು. ಕಥೆ ಕೇಳಿದೆ, ಇಷ್ಟವಾಯಿತು. ನಾನಿಲ್ಲಿ ಕೇವಲ ಹತ್ತಿಪ್ಪತ್ತು ನಿಮಿಷ ಹಾಗೆ ಬಂದು ಹೀಗೆ ಹೋಗುವ ಪಾತ್ರದಲ್ಲಿಲ್ಲ. ಬದಲಾಗಿ ಫೈಟ್​ ಮಾಡಿದ್ದೇನೆ, ನನಗಾಗಿಯೇ ಹಾಡುಗಳಿವೆ, ಚಿತ್ರದ ಪ್ರಾರಂಭದಿಂದ ಕ್ಲೆಮ್ಯಾಕ್ಸ್​ವರೆಗೂ ಇದ್ದೇನೆ. ನನ್ನ ಪಾತ್ರದ ಹೆಸರು ಆರತಿ. ಆಕೆ ಡೆಲಿವರಿ ಗರ್ಲ್​ ಕೆಲಸ ಮಾಡುತ್ತಿರುತ್ತಾಳೆ. ಹಳ್ಳಿ, ಪ್ರಕೃತಿ, ಪ್ರಾಣಿಗಳು ಅಂದರೆ ಆಕೆಗೆ ಇಷ್ಟ. ಫ್ರೆಂಡ್ಸ್​ ಜತೆ ಒಮ್ಮೆ ಆಕೆ ಪ್ರವಾಸ ಹೋದಾಗ ಏನು ನಡೆಯುತ್ತದೆ ಎಂಬುದೇ "ಮೃತ್ಯುದೇವತೆ' ಕಥೆ. ನಾನು ಈ ಚಿತ್ರದಲ್ಲಿ ಕಾಳಿಯ ಗೆಟಪ್​ನಲ್ಲೂ ಕಾಣಿಸಿಕೊಂಡಿದ್ದೇನೆ. ಅದು ನನಗೆ ವಿಶೇಷ ಅನುಭವ. ಆ ಗೆಟಪ್​ನಲ್ಲಿ ಎರಡು ದಿನ ನೈಟ್​ ಶೂಟ್​ ಇತ್ತು. ರಾತ್ರಿ 7ಕ್ಕೆ ಸೆಟ್​ಗೆ ಹೋದರೆ, ರಾತ್ರಿ 9ರವರೆಗೆ ಮೇಕಪ್​ ಆಗುತ್ತಿತ್ತು. ಬಳಿಕ ಬೆಳಗ್ಗೆ 6ರವರೆಗೆ ಚಿತ್ರೀಕರಣ ನಡೆಯುತ್ತಿತ್ತು. ಮೇಕಪ್​ನಲ್ಲಿ ಕ್ಯಾರಾವಾನ್​ನಿಂದ ಹೊರಗೆ ಬರುತ್ತಿದ್ದಂತೆಯೇ, ನನ್ನನ್ನು ನೋಡಿ ಸೆಟ್​ನಲ್ಲಿ ಪಿನ್​ ಡ್ರಾಪ್​ ಸೈಲೆನ್ಸ್​ ಇರುತ್ತಿತ್ತು. ಎಲ್ಲರೂ ಅಷ್ಟು ಶಾಕ್​ ಆಗಿದ್ದರು. ದೇವಿಯ ಕಾಸ್ಟ್ಯೂಮ್​ ಧರಿಸಿ ನಿಂಬೆಹಣ್ಣು ಮತ್ತು ಹೂವಿನ ಹಾರಗಳು, ಎರಡು ಕೆಜಿ ತೂಕದ ತ್ರಿಶೂಲ ಹಿಡಿದು ಸೆಟ್​ಗೆ ಹೋದರೆ ಸಾಕು ನನ್ನಲ್ಲಿ ಎನರ್ಜಿ ಹೆಚ್ಚಾಗುತ್ತಿತ್ತು. ಬ್ರೇಕ್​ ತೆಗೆದುಕೊಳ್ಳದೇ ಡಾನ್ಸ್​ ಮಾಡಿದೆ. ಅಷ್ಟೊಂದು ಎನರ್ಜಿ ಹೇಗೆ ಸಾಧ್ಯ ಅಂತ ಗೊತ್ತಿಲ್ಲ. ಆದರೆ, ಟೇಕ್​ ಮುಗಿದ ಬಳಿಕವೂ ಯಾರೂ ಬಂದು ನನ್ನನ್ನು ಮಾತನಾಡಿಸುತ್ತಿರಲಿಲ್ಲ. ನಿರ್ದೇಶಕರೂ ಹೆದರುತ್ತಿದ್ದರು. ಆ ರೌದ್ರತೆ ನನ್ನನ್ನು ಅಷ್ಟರ ಮಟ್ಟಿಗೆ ಆವರಿಸಿತ್ತು' ಎಂದು ಅನುಭವ ಹಂಚಿಕೊಳ್ಳುತ್ತಾರೆ ಸಾರಿಕಾ.

ತೆಲುಗಿನಲ್ಲಿ ಬಿಜಿ

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅರ್ಧ ಡಜನ್​ ಚಿತ್ರಗಳಲ್ಲಿ ನಟಿಸಿರುವ ಸಾರಿಕಾ, ಇದೀಗ ತೆಲುಗಿಗೆ ಹಾರಿದ್ದಾರೆ. ಸದ್ಯ "ಕೋಹಿನೂರ್​ ಡೈರೀಸ್​' ವೆಬ್​ಸರಣಿ ಮತ್ತು "ದ ಬ್ರೇನ್​' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ""ದ ಬ್ರೇನ್​' ಚಿತ್ರದಲ್ಲಿ ಪೊಲೀಸ್​ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಆಡಿಷನ್​ ಮೂಲಕವೇ ಎರಡು ಪ್ರಾಜೆಕ್ಟ್​ಗಳಲ್ಲೂ ಆಯ್ಕೆಯಾದೆ. ಫಿಟ್​ ಆಗಿದ್ದು, ಆ್ಯಕ್ಷನ್​ ಗೊತ್ತಿರುವ ಕಾರಣ ಪೊಲೀಸ್​ ಪಾತ್ರಕ್ಕೆ ಹೊಂದುತ್ತೇನೆ ಅಂತ "ದ ಬ್ರೇನ್​'ಗೆ ಆಯ್ಕೆಯಾದೆ. ಇನ್ನೊಂದು ಶೆಡ್ಯೂಲ್​ ಬಾಕಿ ಇದೆಯಷ್ಟೆ. ಇನ್ನು ಕನ್ನಡದ "ಅಗ್ರಜ' ನಿರ್ದೇಶಿಸಿದ್ದ, ಶ್ರೀನಂದನ್​ "ಕೋಹಿನೂರ್​ ಡೈರೀಸ್​' ವೆಬ್​ಸಿರೀಸ್​ ನಿರ್ದೇಶಿಸುತ್ತಿದ್ದಾರೆ. ಎರಡು ಸೀಸನ್​ಗಳಿರಲಿವೆ. ಒಂದು ಸೀಸನ್​ ಈ ವರ್ಷ ರಿಲೀಸ್​ ಆಗಲಿದೆ' ಎಂದು ಹೇಳಿಕೊಳ್ಳುತ್ತಾರೆ.