ನ್ಯೂಸ್

ಮಹಾರಾಷ್ಟ್ರ ನವನಿರ್ಮಾಣ ಸೇನಾದ ಬಾವುಟದ ವಿನ್ಯಾಸ ಬದಲು; ಬದಲಾಗಲಿದೆಯೇ ರಾಜ್​ ಠಾಕ್ರೆ ಅದೃಷ್ಟ?

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನಾದ ಬಾವುಟದ ವಿನ್ಯಾಸ ಬದಲಾಗಿದೆ. ಇಂದು ನಡೆದ ಸಭೆಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಕೇಸರಿ ಬಣ್ಣದ ಬಾವುಟವನ್ನು ಹಾರಿಸಲಾಯಿತು.

ಬಾಳಾ ಠಾಕ್ರೆ ಅವರ ಜನ್ಮದಿನವಾದ ಇಂದು ಹೀಗೆ ಎಂಎನ್​ಎಸ್​ ಬಾವುಟ ಬದಲಾಯಿಸಿರುವುದು ಕಾಕತಾಳೀಯವಲ್ಲ. ಎಂಎನ್‌ಎಸ್ ಹೊಸ ಧ್ವಜವು ಕೇಸರಿ ಬಣ್ಣದಾಗಿದ್ದು ಅದರಲ್ಲಿ ಛತ್ರಪತಿ ಶಿವಾಜಿಯ ಆಳ್ವಿಕೆಯ ಕಾಲದ ಮುದ್ರೆ ಇದೆ. ಈ ಮೊದಲಿನದು ನೀಲಿ, ಹಸಿರು ಮತ್ತು ಕೇಸರಿ ಬಣ್ಣದಿಂದ ಕೂಡಿತ್ತು. ಅದರಲ್ಲಿ ರೈಲು ಇಂಜಿನ್​ನ ಚಿತ್ರವಿತ್ತು.

ಗುರುವಾರ ನಡೆದ ಎಂಎನ್​ಎಸ್​ ಸಭೆಯಲ್ಲಿ ಶಿವಾಜಿ ಮತ್ತು ವೀರ ಸಾವರ್ಕರ್​ ಅವರ ಭಾವಚಿತ್ರಗಳಿದ್ದವು. ಸಭೆಯಲ್ಲಿ ರಾಜ್​ ಠಾಕ್ರೆ ಅವರ ಮಗ ಅಮಿತ್​ ಕೂಡ ಭಾಗವಹಿಸಿದ್ದರು.

200ರಲ್ಲಿ ಶಿವಸೇನಾ ತೊರೆದ ರಾಜ್​ ಠಾಕ್ರೆ ಎಂಎನ್​ಎಸ್​ ಕಟ್ಟಿದ್ದರು. ನಂತರ ನಡೆದ ಚುನಾವಣೆಯಲ್ಲಿ ಒಟ್ಟು 289 ಸ್ಥಾನವಿರುವ ಮಹಾರಾಷ್ಟ್ರದಲ್ಲಿ ಎಂಎನ್​ಎಸ್​ನ ಒಬ್ಬರು ಮಾತ್ರ ಚುನಾಯಿತರಾಗಿದ್ದರು. (ಏಜೆನ್ಸೀಸ್)