ನ್ಯೂಸ್

ಭಟ್ಕಳ ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿ; ಮುರುಡೇಶ್ವರ ಎಕ್ಸ್​ಪ್ರೆಸ್​ ರೈಲು ಸಂಚಾರ ಭಾಗಶಃ ರದ್ದು

ಬೆಂಗಳೂರು: ಭಟ್ಕಳ ನಿಲ್ದಾಣದಲ್ಲಿ ಸುರಕ್ಷೆತೆಗೆ ಸಂಬಂಧಿಸಿದ ಕಾಮಗಾರಿ ಮೇ 29ರಿಂದ 31ರವರೆಗೆ ನಡೆಯಲಿರುವ ಹಿನ್ನೆಲೆ ಎರಡು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ಬೆಂಗಳೂರಿನ ಸರ್​ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಬುಧವಾರ ಹೊರಡುವ (ಸಂಖ್ಯೆ 16585) ಮುರುಡೇಶ್ವರ ಎಕ್ಸ್​ಪ್ರೆಸ್​ ರೈಲು ಶಿರೂರು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಮುರುಡೇಶ್ವರ-ಸರ್​ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ ಬೆಂಗಳೂರು ಎಕ್ಸ್​ಪ್ರೆಸ್​ ರೈಲು (ಸಂಖ್ಯೆ 16586) ಮೇ 30ರಂದು ಶಿರೂರು ನಿಲ್ದಾಣದಿಂದ ಮಧ್ಯಾಹ್ನ 2.35ಕ್ಕೆ ಹೊರಡಲಿದೆ. ಶಿರೂರು-ಮುರುಡೇಶ್ವರ ನಿಲ್ದಾಣಗಳ ನಡುವೆ ರದ್ದಾಗಲಿದೆ.