ಮಥುರಾ: ಸನ್ಯಾಸಿಯಂತೆ ಪೋಸು ಕೊಡುತ್ತಿದ್ದ ವ್ಯಕ್ತಿಯೊಬ್ಬ ಐದು ವರ್ಷದ ಮಗುವನ್ನು ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿದ್ದ ಹೆಂಡತಿ, ಮನೆಯವರ ಮೇಲೆ ವಿಷ ಪ್ರಯೋಗ: ಲಂಡನ್ನಲ್ಲಿದ್ದುಕೊಂಡೇ ಮಾಸ್ಟರ್ ಪ್ಲಾನ್ ಮಾಡಿದ ಪತಿ..!
ಘಟನೆಗೆ ಸಂಬಂಧಿಸಿದಂತೆ ಓಂಪ್ರಕಾಶ್(52) ಎಂಬಾತನನ್ನು ಬಂಧಿಸಲಾಗಿದ್ದು, ಗೋವರ್ಧನ್ ಪ್ರದೇಶದ ರಾಧಾ ಕುಂಡ್ ನಲ್ಲಿ ಈ ಘಟನೆ ನಡೆದಿದೆ. ಸನ್ಯಾಸಿ ವೇಷದಲ್ಲಿದ್ದ ವ್ಯಕ್ತಿಯೊಬ್ಬ ಮನೆಯ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕನನ್ನು ಹಿಡಿದಿದ್ದಾನೆ. ಇದಾದ ನಂತರ ಆತನ ಕಾಲುಗಳನ್ನು ಹಿಡಿದುಕೊಂಡು ನೆಲಕ್ಕೆ ಎಸೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿಯ ಈ ಕೃತ್ಯವನ್ನು ಕಂಡು ಅಲ್ಲಿದ್ದ ಜನರು ಆತನತ್ತ ಧಾವಿಸಿ ಹಿಡಿದು ಚೆನ್ನಾಗಿ ಥಳಿಸಿದ್ದು, ಆರೋಪಿಯು ಗಾಯಗೊಂಡಿದ್ದಾನೆ. ಅಷ್ಟರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಏನಾಯಿತು ಎಂಬುದರ ಕುರಿತು ವಿವರವಾದ ಮಾಹಿತಿ ಪಡೆದು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿ ಮಗುವಿನ ಮೇಲೆ ದಾಳಿ ಮಾಡಿದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.(ಏಜೆನ್ಸೀಸ್)