ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಸಾಮಾಜಿಕವಾಗಿ ಮತ್ತು ಶೈಕ್ಷಣೀಕವಾಗಿ ಉತ್ತಮ ಸೇವೆಯನ್ನು ನೀಡಲಿ ಎಂದು ಶಿರಸಿಯ ಎಂಜೆಎಫ್ ಜ್ಯೋತಿ ಭಟ್ ಹೇಳಿದರು.
ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಗಣೇಶ ಬಿಷ್ಠಣ್ಣನವರ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದಾತ್ತ ಮನಸ್ಸಿನ ಹಿರಿಯ ಸದಸ್ಯರು ಇದ್ದು ಎಲ್ಲರ ಸಹಕಾರದಿಂದ ಮತ್ತಷ್ಟು ಸಾಮಾಜಿಕ ಕೊಡುಗೆಗಳನ್ನು ಸದಸ್ಯರು ನೀಡಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಅಸ್ನೋಟಿ ಗ್ರಾಪಂ ಅಧ್ಯಕ್ಷ ಸಂಜಯ ಸಾಳುಂಕೆ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಗ್ರಾಮೀಣ ಈ ಭಾಗದಲ್ಲಿ ರಚನೆಗೊಂಡು ಉತ್ತಮ ಕೆಲಸ ಮಾಡುತ್ತಿರುವುದು ಸ್ಮರಣಿಯ ಎಂದರು. ಜೋನಲ್ ಚೇರ್ ಪರ್ಸನ್ ಆರ್.ಎಚ್. ನಾಯಕ ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸದಾಶಿವಗಡ ಲಯನ್ಸ್ ಕ್ಲಬ್ ಯಾವಾಗಲು ಉತ್ಕೃಷ್ಟ ಮಟ್ಟದ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಜನರಿಗೆ ಹತ್ತಿರವಾಗಿದೆ ಎಂದು ಪ್ರಶಂಶಿಸಿದರು.
ಕಾರ್ಯಕ್ರಮ ಕುರಿತು ರೋಟರಿ ಕ್ಲಬ್ ಕಾರವಾರದ ಮಾಜಿ ಅಧ್ಯಕ್ಷ ನರೇಂದ್ರ ದೇಸಾಯಿ, ರೋಷನ್ ರೇವಣಕರ್, ರಾಮಚಂದ್ರ ಅಂದ್ಲೇಮನೆ ಮಾತನಾಡಿದರು.
ಗಣೇಶ ಬಿಷ್ಠಣ್ಣನವರ್ ಮಾತನಾಡಿ, ಲಯನ್ ಡಿಸ್ಟಿಕ್‌ನಲ್ಲಿ ಸದಾಶಿವಗಡ ಕ್ಲಬ್‌ನ ಸೇವೆಗಳು ಗುರುತಾಗುವಂತೆ ಕೆಲಸ ಮಾಡುತ್ತೇನೆ ಎಂದರು.
ಈ ಸಾಲಿಗೆ ಕ್ಲಬ್ ಕಾರ್ಯದರ್ಶಿಯಾಗಿ ಜೆ.ಬಿ. ತಿಪ್ಪೇಸ್ವಾಮಿ, ಖಜಾಂಚಿಯಾಗಿ ಸುನೀಲ ಐಗಳ, ಸಿಐಎಫ್ ಪ್ರತಿನಿಧಿಯಾಗಿ ಡಾ. ತಬಸಮ್ ಮುಖಾದಮ್, ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಡಾ. ಸಂದಿಪ ಅಣ್ವೇಕರ್, ನಿರ್ದೇಶಕರಾಗಿ ರೋಷನ್ ರೇವಣಕರ್, ರಾಮಚಂದ್ರ ಅಂದ್ಲೇಮನೆ ಡಾ. ನಯೀಮ್ ಮುಖಾದಮ್ ರೀಯಾ ರೇವಣಕರ್, ಪ್ರಥಮ ಉಪಾಧ್ಯಕ್ಷರಾಗಿ ಉಷಾ ರಾಣೆ, ದ್ವೀತಿಯ ಉಪಾಧ್ಯಕ್ಷರಾಗಿ ಪ್ರಣವ ರಾಣೆ, ಕ್ಲಬ್ ಮಾರ್ಕೇಟಿಂಗ್ ಚೇರ್ ಪರ್ಸನ್ ಆಗಿ ನಾಗೇಂದ್ರ ವೇರ್ಣೆಕರ್, ಕ್ಲಬ್ ಚೇರ್ ಪರ್ಸನ್ ಆಗಿ ಸೋನಿಯಾ ಅಣ್ವೇಕರ್, ಕ್ಲಬ್ ಸರ್ವಿಸ್ ಚೇರ್ ಪರ್ಸನ್ ಆಗಿ ಜಯಶೀಲಾ ಬಿಷ್ಠಣ್ಣನವರ್, ಟೇಮರ್ ಸುಭಧಾ ರಾಣೆ, ಟ್ವೀಸ್ಟರ್, ರಘುವೀರ ನಾಯ್ಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಇದನ್ನೂ ಓದಿ:ಕೊಚ್ಚಿ ಮ್ಯೂಸಿಯಂ ಸೇರಲಿದೆ ಬಂಗಡೆ ಮೀನು ..?
ಇದೇ ಸಂದರ್ಭದಲ್ಲಿ ಜ್ಯೋತಿ ಭಟ್, ನರೇಂದ್ರ ದೇಸಾಯಿ, ಅಷ್ಟಮೂರ್ತಿ ಓಲೇಕಾರ ಅವರ ಸಹಯೋಗದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬ್ಯಾಗ್ ನೋಟ್ ಬುಕ್ ಮತ್ತು ಸೊಳ್ಳೆ ಪರದೆ ವಿತರಿಸಿದರು. ಪ್ರತಿಕ್ಷಾ ಸಂಗಡಿಗರ ಪ್ರಾರ್ಥಿಸಿದರು.