ಬೆಂಗಳೂರು:
ವಿಧಾನ ಪರಿಷತ್ ಸದನ ನಡೆಯುವ ಸಂದರ್ಭದಲ್ಲಿ ಗಮನ ಸೆಳೆಯುವ ಸೂಚನೆಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ಕೈಗೆತ್ತಿಕೊಂಡ ಸಂದರ್ಭದಲ್ಲಿ ಅದಕ್ಕೆ ಉತ್ತರಿಸಲು ಸಂಬಂದಿಸಿದ ಸಚಿವರು ಸದನದಲ್ಲಿ ಇರಲಿಲ್ಲ.
ಸಭಾನಾಯಕ ಬೋಸರಾಜು ಅವರಿಗೆ ತರಾಟೆಗೆ ತೆಗೆದುಕೊಂಡ ಹೊರಟ್ಟಿ, ಈ ರೀತಿಯಾದರೆ ಸದನ ನಡೆಸಲು ಆಗುವುದಿಲ್ಲ. ಮೊದಲೇ ತಿಳಿಸಿದ್ದರೂ, ನಿಮ್ಮ ಸಚಿವರು ಇನ್ನೂ ಯಾಕೆ ಬಂದಿಲ್ಲ ಎಂದು ಗದರಿದ್ದಲ್ಲದೆ, 5 ನಿಮಿಶ ಸದನವನ್ನು ಮುಂದೂಡಿದರು.
ತಕ್ಷಣವೇ ಕೆಳ ಮನೆಯಲ್ಲಿದ್ದ ಸಚಿವ ಮಧು ಬಂಗಾರಪ್ಪ ಅವರನ್ನು ಮುಖ್ಯಸಚೇತಕ ಸಲೀಂ ಅಹಮದ್ ಸದನಕ್ಕೆ ಕರೆತಂದ ಬಳಿಕ ಸದನ ನಡೆಯಿತು.