ನ್ಯೂಸ್

'ಮಿಲ್ಕಿ​​​​ ಬ್ಯೂಟಿ' ತಮನ್ನಾ ಅಭಿಮಾನಿಗಳಿಗೆ ಇದು ಬೇಸರದ ಸುದ್ದಿ!

ಆಂಧ್ರಪ್ರದೇಶ: ತಮಿಳು ಮತ್ತು ತೆಲುಗು ಚಿತ್ರರಂಗದ 'ಮಿಲ್ಕಿ​​​ ಬ್ಯೂಟಿ' ನಟಿ ತಮನ್ನಾ ಭಾಟಿಯಾ ಅವರ ಅಭಿಮಾನಿಗಳಿಗೆ ಇದೀಗ ಬೇಸರದ ಸುದ್ದಿಯೊಂದು ಕೇಳಿಬಂದಿದೆ.

ತಮನ್ನಾ ನಟನೆಯ 'ಜೈಲರ್' ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದಲ್ಲಿ ಅವರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿರುವ 'ಕಾವಾಲಾ' ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆಯುವ ಮೂಲಕ ವ್ಯಾಪಕ ವೈರಲ್ ಆಗಿದೆ. ಸದ್ಯ ಈ ಹಾಡಿನ ತೆಲುಗು ವರ್ಶನ್​ ಅನ್ನು ರಿಲೀಸ್​ ಮಾಡಲು ಹೈದರಾಬಾದ್​​ ಕಾಲೇಜಿಗೆ ಬರುತ್ತೇನೆ ಎಂದು ಮಂಗಳವಾರ ಹೇಳಿದ್ದ ನಟಿ, ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಆಗಮಿಸಲು ಸಾಧ್ಯವಾಗಿಲ್ಲ. ಈ ಸುದ್ದಿ ಅವರ ಅಭಿಮಾನಿಗಳಿಗೆ ತೀವ್ರ ಬೇಸರವನ್ನು ತಂದೊಡ್ಡಿದೆ.

'ಜೈಲರ್‌' ಚಿತ್ರದ ಮೊದಲ ಸಿಂಗಲ್ ಕಾವಾಲಾ ಸಾಂಗ್​ ತಮಿಳು ಆವೃತ್ತಿಯಲ್ಲಿ ಹಿಟ್​ ಆಗಿದ್ದು, ತೆಲುಗು ಭಾಷೆಯ ಹಾಡನ್ನು ಹೈದರಾಬಾದ್‌ನ ಸಿಎಂಆರ್ ಕಾಲೇಜಿನಲ್ಲಿ ಬಿಡುಗಡೆಗೊಳಿಸಲು ಬರಲಿದ್ದೇನೆ ಎಂದು ತಮನ್ನಾ ಹೇಳಿದ್ದರು. ಆದ್ರೆ, ಹೈದರಾಬಾದ್‌ನಲ್ಲಿ ಭಾರೀ ಮಳೆಯಿಂದಾಗಿ ರಿಲೀಸ್​ ಸಮಾರಂಭವನ್ನು ಇದೀಗ ಮೊಟಕುಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಸಾಂಗ್​ ಅನ್ನು ಜೆಮಿನಿ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು (ಜುಲೈ 26) ಸಂಜೆ 4 ಗಂಟೆಗೆ ಆಫ್​ಲೈನ್​ ಮೂಲಕ ರಿಲೀಸ್​ ಮಾಡಲಾಗಿದೆ.

ತಮ್ಮ ನೆಚ್ಚಿನ ನಟಿ ಕಾಲೇಜಿಗೆ ಆಗಮಿಸಲಿದ್ದಾರೆ ಎಂದು ಕಾದು ಕುಳಿತ್ತಿದ್ದ ಅಭಿಮಾನಿಗಳಿಗೆ ಇದೀಗ ಅತೀವ ಬೇಸರ ಉಂಟಾಗಿದೆ. ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ ಜೈಲರ್​ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ,(ಏಜೆನ್ಸೀಸ್).