ನ್ಯೂಸ್

ಶಬರಿಮಲೆ ತುಲಾಮಾಸ ಪೂಜೆ ಅ.17ರಿಂದ ಆರಂಭ

Bengaluru - General - Rama Kishan K V

ಕಾಸರಗೋಡು: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತುಲಾಮಾಸದ ಪೂಜೆಗಾಗಿ ಅ.17ರಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಿದೆ. 18ರಂದು ಬೆಳಗ್ಗಿನಿಂದ ಅಭಿಷೇಕ ಆರಂಭವಾಗಲಿದೆ.

ಐದು ದಿವಸಗಳ ತುಲಾಮಾಸದ ಪೂಜೆಯ ನಂತರ 22ರಂದು ರಾತ್ರಿ 10ಕ್ಕೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಈ ಸಂದರ್ಭ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಮಾಳಿಗಪುರತ್ತಮ್ಮ ದೇವಸ್ಥಾನಕ್ಕೆ 2023-24ನೇ ಸಾಲಿಗೆ ನೂತನ ಅರ್ಚಕರ ನೇಮಕವಾಗಲಿದೆ. 18ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಎರಡೂ ಕ್ಷೇತ್ರಗಳ ಪ್ರಧಾನ ಅರ್ಚಕರ ಹುದ್ದೆಗೆ ತಲಾ 17ಮಂದಿಯ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಚೀಟಿ ಎತ್ತುವ ಮೂಲಕ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ ಹಾಗೂ ಮಾಳಿಗಪುರತ್ತಮ್ಮ ದೇವಾಲಯದ ಮುಖ್ಯ ಅರ್ಚಕರನ್ನು ಆಯ್ಕೆ ಮಾಡಲಾಗುತ್ತದೆ.