ನ್ಯೂಸ್

ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

ಭೋಪಾಲ್: ಒಳ್ಳೆಯ ಉದ್ಯೋಗದಲ್ಲಿದ್ದು ಸ್ವಯಂ ನಿವೃತ್ತಿ ಪಡೆದವರು, ಇಲ್ಲವೇ ನಿವೃತ್ತರಾದವರೇ ಈ ಚಾಲಾಕಿ ಮಹಿಳೆಯರ ಟಾರ್ಗೆಟ್‌. ಅವರನ್ನು ಹೇಗೋ ಫೋನ್‌ನಲ್ಲಿ ಪರಿಚಯ ಮಾಡಿಕೊಂಡು ನಂತರ ಪಾರ್ಕ್‌ಗೆ ಕರೆದು ಅವರ ಜತೆಗಿರುವ ವಿಡಿಯೋ ಮಾಡಿಕೊಂಡು ಅವರಿಗೆ ಬೆದರಿಕೆ ಹಾಕುವುದೇ ಈಕೆಯ ಕೆಲಸ. ಇದಕ್ಕೆ ಈ ಫೋಟೋದಲ್ಲಿ ಯುವಕನ ಸಾಥ್‌. ಅವನೇ ಈ ವಿಡಿಯೋ ಮಾಡುವವ.

ಇಂಥದ್ದೊಂದು ಖತರ್ನಾಕ್‌ ಮಹಿಳೆ ಮತ್ತು ಆಕೆಯ ಜತೆಗಿರುವ ಯುವಕ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ. ಈಗಾಗಲೇ ಹಲವಾರು ಮಂದಿಗೆ ಬ್ಲ್ಯಾಕ್‌ಮೇಲ್‌ ಮಾಡಿ ದುಡ್ಡು ಪೀಕಿಸಿರುವ ಈ ಮಹಿಳೆ ವಿರುದ್ಧ 65 ವರ್ಷದ ವೃದ್ಧರೊಬ್ಬರು ದೂರು ನೀಡಿದ್ದು, ಈಗ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಈ ವೃದ್ಧರನ್ನು ಅದ್ಹೇಗೋ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಅವರ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದಾರೆ. ಇವರು ಒಳ್ಳೆಯ ಉದ್ಯೋಗದಲ್ಲಿದ್ದು ನಿವೃತ್ತರಾದವರು. ಆದ್ದರಿಂದ ತಾನು ವಿಮೆ ಮಾಡಿಸುವುದಾಗಿ ಮಾತಿನ ಮೋಡಿಯಲ್ಲಿ ಸಿಲುಕಿಸಿರುವ ಮಹಿಳೆ ಅವರನ್ನು ಪಾರ್ಕ್‌ಗೆ ಕರೆದಿದ್ದಾಳೆ.

ನಂತರ ವಿಮೆ ಮಾಡಿಸಲು ಎಲ್ಲಾ ದಾಖಲೆ ಪಡೆದುಕೊಂಡಿರುವ ಇವರು ಆಕೆ ಹೇಳಿರುವ ಪಾರ್ಕ್‌ಗೆ ಹೋಗಿದ್ದಾರೆ. ನಂತರ ಸಲುಗೆಯಿಂದ ಅವರ ಬಳಿ ಬಂದ ಮಹಿಳೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದರ ವಿಡಿಯೋ ಅನ್ನು ಯುವಕ ಮಾಡಿಕೊಂಡಿದ್ದಾನೆ. ನಂತರ ಅವರ ಮೊಬೈಲ್‌ಗೆ ಆ ವಿಡಿಯೋ ಕಳುಹಿಸಿ, 2 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ನೋಡಿದ ವೃದ್ಧ ಗಾಬರಿಯಾಗಿದ್ದಾರೆ. ನಂತರ ಮಹಿಳೆ ದುಡ್ಡು ಕೊಡದೇ ಹೋದರೆ ಈ ವಿಡಿಯೋ ವೈರಲ‌ ಮಾಡಿ ಮಾನ ಕಳೆಯುವುದಾಗಿ ಹೇಳಿದ್ದಾಳೆ.

ಅದಕ್ಕೆ ಸೊಪ್ಪು ಹಾಕದ ವೃದ್ಧ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ನಂತರ ಮಹಿಳೆ ಮತ್ತು ಯುವಕನನ್ನು ಬಂಧಿಸಿದಾಗ ಇದೇ ರೀತಿ ಹಲವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸಂಪಾದನೆ ಮಾಡಿರುವುದು ಬೆಳಕಿಗೆ ಬಂದಿದೆ.