ನ್ಯೂಸ್

ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

ಅಹಮದಾಬಾದ್: ಗಂಡ, ಅತ್ತೆಯ ಮನೆಯವರ ದೌರ್ಜನ್ಯದಿಂದ ಪೊಲೀಸ್​ ಠಾಣೆಗೆ ಮಹಿಳೆಯರು ಕೇಸು ದಾಖಲು ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ಗಂಡನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಕಾರಣ ಸ್ವಲ್ಪ ವಿಚಿತ್ರವಾಗಿದೆ.

26 ವರ್ಷದ ಯುವತಿಯೊಬ್ಬಳು ಮದುವೆಯಾದಾಗಿನಿಂದಲೂ ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ದೂರು ದಾಖಲು ಮಾಡಿದ್ದಾಳೆ.

ಬ್ಯಾಂಕ್​ ಬ್ಯಾಂಕ್​ ಉದ್ಯೋಗಿ ಆಗಿರುವ ಯುವತಿಗೆ 2018ರಲ್ಲಿ ಮದುವೆಯಾಗಿದೆ. ಎರಡು ವರ್ಷಗಳಿಂದಲೂ ಪತಿ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿಲ್ಲ ಎಂದು ಠಾಣೆಯಲ್ಲಿ ಆಕೆ ದೂರಿದ್ದಾಳೆ. ತಾನು ಒತ್ತಾಯ ಮಾಡಿದ್ದರಿಂದ ಹನಿಮೂನ್​ಗೆಂದು ಥಾಯ್ಲೆಂಡ್​ಗೆ ಹೋಗಲಾಗಿತ್ತು. ಆದರೆ ಹನಿಮೂನ್​ನಲ್ಲಿ ಕೂಡ ಪತಿ ದೂರವೇ ಇದ್ದ ಎಂದು ಹೇಳಿದ್ದಾಳೆ ಯುವತಿ.

ಆತನಿಗೆ ಲೈಂಗಿಕಾಸಕ್ತಿ ಇಲ್ಲದಿರಬಹುದು ಎನ್ನುವ ಕಾರಣದಿಂದ ಅದರಲ್ಲಿ ಆಸಕ್ತಿ ಹುಟ್ಟಿಸುವಂಥ ಔಷಧಗಳನ್ನೂ ನೀಡಿದ್ದೇನೆ. ಅದರೂ ಆತ ತನ್ನ ಹತ್ತಿರ ಬರುತ್ತಿರಲಿಲ್ಲ. ಇದರಿಂದ ಸಂದೇಹಗೊಂಡು ನಾನು ಎಲ್ಲೆಡೆ ವಿಚಾರಿಸಿದಾಗ, ತನ್ನ ಗಂಡನ ಖಾಸಗಿ ಅಂಗಕ್ಕೆ ಅನೇಕ ವರ್ಷಗಳ ಹಿಂದೆ ಪೆಟ್ಟು ಬಿದ್ದಿರುವುದು ತಿಳಿದಿದೆ. ಈ ಕಾರಣದಿಂದ ಆತ ಲೈಂಗಿಕ ಸಂಪರ್ಕ ನಡೆಸಲು ಅಸಮರ್ಥರಾಗಿರುವುದು ತಿಳಿದಿದೆ ಎಂದು ಯುವತಿ ಹೇಳಿದ್ದಾಳೆ.

ಇವೆಲ್ಲವನ್ನೂ ಮುಚ್ಚಿಟ್ಟು ನನಗೆ ಮದುವೆ ಮಾಡಿದ್ದಾರೆ. ಈ ಬಗ್ಗೆ ನಾನು ಜಗಳವಾಡಿದಾಗ ನನ್ನ ಅತ್ತೆ ಹಾಗೂ ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳಾ ಪೊಲೀಸ್​ ಠಾಣೆಯಲ್ಲಿ ಈಕೆ ದೂರು ಸಲ್ಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ, ತನಗೆ ಮೋಸವಾಗಿದ್ದು, ನನ್ನ ವಿರುದ್ಧ ದೌರ್ಜನ್ಯವನ್ನೂ ಎಸಗಲಾಗುತ್ತಿದೆ ಎಂದಿರುವ ಈಕೆ, ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾಳೆ. ಸದ್ಯ ದೂರಿನ ಅನ್ವಯ ಎಫ್​ಐಆರ್​ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.