ನ್ಯೂಸ್

ಈ ಮಾದಕ ಬೆಡಗಿಯಲ್ಲಿ ಅಡಗಿದೆ ಒಂದು ವಿಶೇಷತೆ: ಏನೆಂದು ಪತ್ತೆ ಮಾಡಬಲ್ಲಿರಾ?

ಸಾಮಾನ್ಯವಾಗಿ ಎಲ್ಲ ಮನುಷ್ಯರನ್ನು ದೇವರು ಒಂದೇ ತೆರನಾಗಿ ಸೃಷ್ಟಿ ಮಾಡಿದ್ದರೂ ಕೆಲವೊಂದು ಜನರಲ್ಲಿ ಒಂದು ಸ್ವಲ್ಪ ವ್ಯತ್ಯಾಸಗಳು ಇರುತ್ತವೆ. ಎರಡು ಕೈ, ಎರಡು ಕಾಲು, ಎರಡು ಕಣ್ಣು, ಒಂದೇ ಮೂಗು, ಬಾಯಿ ಎಲ್ಲವೂ ಮನುಷ್ಯನಿಗೆ ಸಹಜವಾಗಿದ್ದರೂ ಕೆಲವೊಮ್ಮೆ ಅಪರೂಪದ ಎಂಬಂತೆ ಇದರಲ್ಲಿ ವ್ಯತ್ಯಾಸಗಳು ಆಗುತ್ತವೆ.

ಮನುಷ್ಯರು ಎಲ್ಲರೂ ಒಂದೇ ರೀತಿ ಇದ್ದರೂ, ಒಬ್ಬೊಬ್ಬರಲ್ಲಿಯೂ ಒಂದೊಂದು ತೆರನಾದ ವ್ಯತ್ಯಾಸ ಇದ್ದೇ ಇರುತ್ತದೆ. ಅದಕ್ಕಾಗಿಯೇ ಕೋಟ್ಯಂತರ ಮಂದಿಯೂ ಒಬ್ಬರಂತೆ ಒಬ್ಬರು ಇರುವುದಿಲ್ಲ. ನೋಡಲು ಒಂದೇ ರೀತಿ ಎನ್ನಿಸಿದರೂ ಅಲ್ಪಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ.
ಅವಳಿ- ಜವಳಿಯಾಗಿದ್ದರೂ, ಒಂದು ಕ್ಷಣ ನೋಡಿದಾಗ ಥೇಟ್​ ಒಂದೇ ರೀತಿ ಇದ್ದು, ಅವರ್ಯಾರು, ಇವರ್ಯಾರು ಎಂದು ಗೊತ್ತಾಗದಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅವರಲ್ಲಿಯೂ ವ್ಯತ್ಯಾಸ ಇದ್ದೇ ಇರುತ್ತದೆ. ಅದಕ್ಕೇ ಅಲ್ಲವೇ? ಪ್ರತಿಯೊಬ್ಬರನ್ನೂ ಗುರುತಿಸಲು ಸಾಧ್ಯವಾಗುವುದು.

ಅದೇನೆ ಇರಲಿ. ಸದ್ಯ ಈಗ ಈ ಹುಡುಗಿಯ ವಿಷಯಕ್ಕೆ ಬರೋಣ. ಈ ಚಿತ್ರದಲ್ಲಿರುವ ಹುಡುಗಿಯನ್ನು ಸೂಕ್ಷ್ಮವಾಗಿ ಗಮನಿಸಿ. ಏನಾದರೊಂದು ವಿಶೇಷತೆ ಕಾಣಿಸುತ್ತದೆಯಾ ನೋಡಿ... ತನ್ನ ಮಾದಕ ಕಣ್ಣುಗಳಿಂದ ದೃಷ್ಟಿ ಬೀರುತ್ತಾ ಇರುವ ಈ ಬೆಡಗಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಶೇಷತೆ ಕಾಣಿಸುತ್ತದೆ. ಏನೆಂದು ಹೇಳಬಲ್ಲಿರಾ?



ಗೊತ್ತಾಗಲಿಲ್ಲವೇ? ಎಲ್ಲವೂ ಸರಿಯಾಗಿದೆಯೇ ಇದೆ ಎಂದು ನಿಮಗೆ ಅನ್ನಿಸುತ್ತಿದೆಯೆ? ಹಾಗಿದ್ದರೆ ಒಂದು ಹಿಂಟ್​ ಕೊಡುತ್ತೇವೆ ನೋಡಿ... ಈ ಚೆಲುವೆ ಬಾಯಲ್ಲಿ ಬೆರಳು ಹಾಕಿ ದೃಷ್ಟಿ ಬೀರುತ್ತಿದ್ದಾಳಲ್ಲ, ಅಲ್ಲಿಯೇ ಒಮ್ಮೆ ಗಮನಿಸಿ ನೋಡಿ...

ಇನ್ನೂ ಗೊತ್ತಾಗಲಿಲ್ವಾ? ಎಲ್ಲವೂ ಸರಿಯಾಗಿದೆಯೇ ಇದೆ ಅನಿಸ್ತಿದ್ಯಾ? ಹೋಗಲಿ ಬಿಡಿ. ನಾವೇ ಹೇಳುತ್ತೇವೆ. ಅವಳ ಕೈಯನ್ನೊಮ್ಮೆ ನೋಡಿಬಿಡಿ...

ಈಗಲೂ ತಿಳಿದಿಲ್ವಾ? ಈ ಸುಂದರಿ ತನ್ನ ಬಾಯಲ್ಲಿ ಹಾಕಿರುವ ಬೆರಳು ತೋರುಬೆರಳು. ಅಂದರೆ ತೋರುಬೆರಳು ಬಾಯಲ್ಲಿ ಇದ್ದರೆ, ಮಿಕ್ಕ ಮೂರು ಬೆರಳು ಒಂದು ಪಕ್ಕ, ಹೆಬ್ಬೆರಳು ಆ ಪಕ್ಕ ಇರಬೇಕು ಅಲ್ವಾ? ಈಗ ಚಿತ್ರ ನೋಡಿ...


ಬಾಯಲ್ಲಿ ಹಾಕಿರುವ ಬೆರಳಿನ ಈ ಪಕ್ಕ ನಾಲ್ಕು ಬೆರಳು ಆ ಪಕ್ಕ ಹೆಬ್ಬೆರಳು ಇದೆ. ಅಂದರೆ ಸಿಂಪಲ್​ ಆಗಿ ಹೇಳಬೇಕೆಂದರೆ, ಈಕೆಗೆ ಇರುವುದು ಆರು ಬೆರಳು. ಇದೇನು ಭಾರಿ ವಿಶೇಷವಲ್ಲ. ಅನೇಕ ಮಂದಿಯಲ್ಲಿ ಆರು ಬೆರಳುಗಳು ಇರುತ್ತವೆ. ಆದರೆ ಎಕ್ಸ್​ಟ್ರಾ ಬೆರಳಿಗೆ ಶಕ್ತಿ ಇಲ್ಲದೇ ಹಾಗೆಯೇ ಜೋತಾಡುವುದೇ ಹೆಚ್ಚು. ಆದರೆ ಈ ಯುವತಿಯ ಆರೂ ಬೆರಳುಗಳು ಸ್ಟ್ರಾಂಗ್​ ಆಗಿರುವುದನ್ನು ಚಿತ್ರದಲ್ಲಿ ಕಾಣಬಹುದು.