ಗಾಜಿಯಾಬಾದ್: ಮದುವೆಗಳನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವ ಕನಸು ಕಾಣುವ ಹಲವು ಯುವಕ- ಯುವತಿಯರು ಎಡವಟ್ಟು ಮಾಡಿಕೊಳ್ಳುತ್ತಿರುವ ಘಟನೆಗಳು ಈಚೆಗೆ ಹೆಚ್ಚಾಗುತ್ತವೆ.
.ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಕೂಡ ಇಂಥದ್ದೇ ಒಂದು ಘಟನೆ ನಡೆದಿದೆ. ನಗರ್ ಕೊತ್ವಾಲಿ ಪ್ರದೇಶದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾವಿ ಪತ್ನಿಯನ್ನು ಇಂಪ್ರೆಸ್ ಮಾಡಲು ವರ ಮದುವೆ ನಡೆಯುತ್ತಿರುವಾಗಲೇ ಗುಂಡು ಹಾರಿಸಿದ್ದಾನೆ. ಭಾವಿ ಪತಿಯ ಈ ಶೌರ್ಯ ಕಂಡು ಹಿರಿಹಿರಿ ಹಿಗ್ಗಿದ ವಧು ಕೂಡ ಆತನ ಕೈಹಿಡಿದು ಸಾಥ್‌ನೀಡಿದ್ದಾಳೆ.
ಅಲ್ಲಿದ್ದವರು ಎಲ್ಲರೂ ಚಪ್ಪಾಳೆ ತಟ್ಟಿ ಸಂತಸ ಪಟ್ಟಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಈ ಸಾಧನೆಯ ವಿಡಿಯೋ ಮಾಡಿದವರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದು ಪೊಲೀಸರ ಗಮನಕ್ಕೆ ಬಂದು ಅವರು ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಕಾನೂನುಬಾಹಿರವಾಗಿ ಈ ರೀತಿ ಮದುವೆ ಮನೆಯಲ್ಲಿ ಗುಂಡು ಹಾರಿಸಿದ್ದಕ್ಕಾಗಿ ಕೇಸ್ ದಾಖಲಾಗಿದೆ. ಮದುವೆಯ ನಂತರ ಮಧುಚಂದ್ರಕ್ಕೆ ಹೋಗಬೇಕಾದ ಜೋಡಿ ಇದೀಗ ಪೊಲೀಸ್ ಠಾಣೆ ಅಲೆಯುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ