ನ್ಯೂಸ್

VIDEO: ಗಂಡ- ಹೆಂಡಿರ ಜಗಳ ಬಾಲ್ಕನಿ ಗ್ರಿಲ್‌ ಸಹಿತ ದೊಪ್ಪನೆ ಕೆಳಗೆ ಬೀಳುವತನಕ!

suchetana

ಸೇಂಟ್‌ ಪೀಟರ್ಸ್‌ಬರ್ಗ್‌ (ರಷ್ಯ): ಗಂಡ- ಹೆಂಡಿರ ಜಗಳ ಉಂಡುಮಲಗುವತನಕ ಎನ್ನುವ ಗಾದೆ ಮಾತು ಇದೆ. ಆದರೆ ರಷ್ಯದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ದಂಪತಿಯೊಬ್ಬರ ನಡುವಿನ ಜಗಳ ಬಾಲ್ಕನಿ ಗ್ರಿಲ್‌ ಕಿತ್ತು ಅದರ ಸಹಿತ ಇಬ್ಬರೂ ಬೀಳುವ ತನಕ ಮುಂದುವರೆದಿದೆ.

ಈ ದಂಪತಿ ಕಿತ್ತಾಡಿಕೊಂಡು ನಂತರ ಬಾಲ್ಕನಿಯ ಗ್ರಿಲ್‌ಗಳ ಸಹಿತ ಕೆಳಕ್ಕೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಾರು 25 ಅಡಿ ಮೇಲಿನಿಂದ ದಂಪತಿ ಒಟ್ಟಿಗೇ ಕೆಳಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ, ಕಾಲು ಮುರಿದಿರುವ ಶಂಕೆ ಇದ್ದು, ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಓಲ್ಗಾ ವೋಲ್ಕೊವಾ ಮತ್ತು ಯೆವ್ಗೆನಿ ಕಾರ್ಲಗಿನ್ ಎನ್ನುವ ದಂಪತಿ ಬಾಲ್ಕನಿಯ ಸಮೀಪ ನಿಂತು ಕಿತ್ತಾಡುತ್ತಿದ್ದರು. ಇದನ್ನು ಅಲ್ಲಿಂದ ಸಾಗುತ್ತಿರುವವರೊಬ್ಬರು ವಿಡಿಯೋ ಮಾಡುತ್ತಿದ್ದರು. ಆದರೆ ಅದೇ ಸಮಯಕ್ಕೆ ಅವರ ಕಿತ್ತಾಟ ಜೋರಾಗಿ ಬಾಲ್ಕನಿಯ ಗ್ರಿಲ್‌ ಮುರಿದುಹೋಗಿದೆ. ಎರಡನೆಯ ಮಹಡಿಯಿಂದ ದಂಪತಿ ಒಟ್ಟಿಗೇ ಕೆಳಕ್ಕೆ ಬಿದ್ದಿದ್ದಾರೆ.

ಇವೆಲ್ಲವೂ ವಿಡಿಯೋದಲ್ಲಿ ದಾಖಲಾಗಿದ್ದು, ಇದೀಗ ಜಾಲತಾಣದಲ್ಲಿ ಸುದ್ದಿ ಮಾಡುತ್ತಿದೆ.