ನ್ಯೂಸ್

ಕುತೂಹಲವಾಗುತ್ತಲೇ ಸಾಗಿದೆ ಅಮೆರಿಕ ಚುನಾವಣೆ: ಪತ್ರಿಕಾಗೋಷ್ಠಿಯಲ್ಲಿ ರಂಪಾಟ!

suchetana

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಇನ್ನೂ ಅಂತಿಮಗೊಳ್ಳದಿದ್ದರೂ, ಈವರೆಗಿನ ಬೆಳವಣಿಗೆಗಳನ್ನು ನೋಡಿದರೆ, ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವಿನತ್ತ ಸಾಗಿದ್ದಾರೆ. ಆದರೆ ಇದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರನ್ನು ಕೆರಳುವಂತೆ ಮಾಡಿದ್ದು, ಇದಾಗಲೇ ಅವರು ಅಮೆರಿಕದ ಹಾದಿ ಬೀದಿಗಳಲ್ಲಿ ರಂಪಾಟ ಮಾಡಿದ್ದಾರೆ.

ಇಲ್ಲಿಯವರೆಗಿನ ಬೆಳವಣಿಗೆ ಕುರಿತಂತೆ ನೇವಾಡದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿತ್ತು. ಮತಎಣಿಕೆ ಕಾರ್ಯವನ್ನು ಮುಗಿಸಿದ ಚುನಾವಣಾ ಅಧಿಕಾರಿಗಳು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲೇ ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬ ಜೋ ಬಿಡೆನ್ ವಿರುದ್ಧ ಕೂಗಾಟ ಶುರು ಮಾಡಿದ್ದಾರೆ.

ಡೆಮಾಕ್ರಟಿಕ್ ಪಕ್ಷವು ಮತಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದೆ ಎಂದು ಈತ ಆರೋಪಿಸಿದ್ದಾನೆ . BBQ, Beer, Freedom" ಎಂದು ಬರೆದುಕೊಂಡಿದ್ದ ಬಿಳಿ ಟೀ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಮಧ್ಯೆ ಪ್ರವೇಶಿಸಿ ಮಾಧ್ಯಮಗಳೂ ಸೇರಿದಂತೆ ಹಲವರ ವಿರುದ್ಧ ಕೆರಳಿ ಕೆಂಡಾಮಂಡಲವಾಗಿ ಕೂಗಾಟ ನಡೆಸಿದರು.

ಪ್ರಪಂಚದಿಂದ ನಮಗೆ ಸ್ವಾತಂತ್ರ್ಯ ನೀಡಿ, ನಾವು ಪ್ರಪಂಚದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕೆ ಬಯಸುತ್ತಿದ್ದೇವೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತಗಳನ್ನು ಕದಿಯುತ್ತಿದ್ದಾರೆ ಎಂದು ಈತ ಕೂಗಿರುವುದು ವಿಡಿಯೋದಲ್ಲಿ ಕೇಳಿಸಿದೆ.

ನೇವಾಡ ಕಣದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಕಾಯ್ದುಕೊಂಡಿರುವುದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಆರು ಎಲೆಕ್ಟೋರಲ್ ಮತಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಬಿಡೆನ್ 49.3ರಷ್ಟು ಮತ ಪಡೆದುಕೊಂಡಿದ್ದರೆ, ಡೊನೊಲ್ಡ್ ಟ್ರಂಪ್ 48.7ರಷ್ಟು ಮತ ಗಳಿಸಿದ್ದಾರೆ.