ನ್ಯೂಸ್

ಅದಿತಿಯನ್ನು ಗುಟ್ಟಾಗಿ ಮದುವೆಯಾದ ‘ದೇವೋಂಕೆ ದೇವ್ ಮಹಾದೇವ್’-​ ವಿವಾಹದ ಫೋಟೋ ವೈರಲ್‌

ಮುಂಬೈ: ಖಾಸಗಿ ಹಿಂದಿ ಚಾನೆಲ್‌ನಲ್ಲಿ ದೇವೋಂಕೆ ದೇವ್ ಮಹಾದೇವ್​​​ ಧಾರಾವಾಹಿಯಲ್ಲಿ ಶಿವನ ಪಾತ್ರಧಾರಿ ನಟ ಮೋಹಿತ್​ ರೈನಾ ಗುಟ್ಟಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ‘ಉರಿ; ಚಿತ್ರದ ಮೂಲಕವೂ ಮನೆಮಾತಾಗಿರುವ ಮೋಹಿತ್‌ ತಮ್ಮ ಬಹುವರ್ಷಗಳ ಗೆಳತಿ ಅದಿತಿ ಜತೆ ಯಾರಿಗೂ ಹೇಳದೇ ಮದುವೆಯಾಗಿದ್ದಾರೆ.

ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಅವರು ಮದುವೆಯಾಗಿರುವ ವಿಷಯ ಬಹಿರಂಗಗೊಂಡಿದೆ. ಇದನ್ನು ಖುದ್ದು ಮೋಹಿತ್‌ ಅವರಿಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ
ಕೆಲವು ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಅವರು ಹೇಳಿದ್ದಾರೆ.

ಇವರಿಬ್ಬರೂ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದು ಎನ್ನಲಾಗಿದೆ. ಆದರೆ ಇವರ ಮದುವೆಗೆ ಕೆಲವೊಂದು ಅಪಸ್ವರಗಳು ಕೇಳಿಬಂದಿದ್ದವು. ಈ ಬಗ್ಗೆ ಖುದ್ದು ಮೋಹಿತ್‌ ಅವರೇ ಹೇಳಿಕೊಂಡಿದ್ದಾರೆ. ‘ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಅನೇಕ ಅಡೆತಡೆ ಬಂದಿದ್ದವು. ಅವುಗಳನ್ನು ಭೇದಿಸಿ, ಹಲವು ಭರವಸೆಗಳೊಂದಿಗೆ ಹೆತ್ತವರ ಆಶೀರ್ವಾದದೊಂದಿಗೆ ಇಬ್ಬರು ಮುಂದೆ ಸಾಗಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

ನಮ್ಮ ಈ ಹೊಸ ಪ್ರಯಾಣದಲ್ಲಿ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನಮಗೆ ಬೇಕು ಎಂದು ನಟ ಕೋರಿದ್ದಾರೆ.