ನ್ಯೂಸ್

ಉಮಾ ಭಾರತಿಗೆ ಕರೊನಾ ಪಾಸಿಟಿವ್: ಟ್ವೀಟರ್​ನಲ್ಲಿ ಮಾಹಿತಿ

suchetana

ನವದೆಹಲಿ: ಕರೊನಾ ವೈರಸ್​ ಕ್ಷಣಕ್ಷಣಕ್ಕೂ ಆತಂಕ, ತಲ್ಲಣವನ್ನು ಸೃಷ್ಟಿಸುತ್ತಲೇ ಸಾಗಿದೆ. ಇದಾಗಲೇ ಹಲವಾರು ರಾಜಕೀಯ ಮುಖಂಡರನ್ನೂ ಆವರಿಸಿ, ಕೆಲವರ ಪ್ರಾಣ ತೆಗೆದಿದೆ ಈ ವೈರಸ್​.

ಇದೀಗ ಬಿಜೆಪಿ ನಾಯಕಿ ಉಮಾ ಭಾರತಿ ಅವರ ಸರದಿ. ನಿನ್ನೆ ತಡರಾತ್ರಿ ಟ್ವಿಟರ್​ ಮೂಲಕ ಮಾಹಿತಿ ನೀಡಿರುವ ಉಮಾ ಭಾರತಿ, ತಮಗೆ ಕರೊನಾ ಪಾಸಿಟಿವ್​ ಬಂದಿರುವುದಾಗಿ ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ಅವರು ಅಲ್ಪ ಜ್ವರದಿಂದ ಬಳಲುತ್ತಿದ್ದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿರುವ ಉಮಾ ಭಾರತಿ, ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರವಾಸದಲ್ಲಿ ಇದ್ದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿದ್ದೆ. ಆದರೂ ಕರೊನಾ ಪಾಸಿಟಿವ್​ ಎಂಬ ವರದಿ ಬಂದಿದೆ ಎಂದಿದ್ದಾರೆ. ಹರಿದ್ವಾರ ಮತ್ತು ಋಷಿಕೇಶ್ ನಡುವೆ ಇರುವ ವಂದೇ ಮಾತರಂ ಕುಂಜ್​ನಲ್ಲಿ ಸದ್ಯ ಐಸಲೇಷನ್​ನಲ್ಲಿ ಇರುವುದಾಗಿ ಹೇಳಿದ್ದಾರೆ.

ನಾಲ್ಕು ದಿನಗಳ ನಂತರ ಮತ್ತೊಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತೇನೆ. ಒಂದು ವೇಳೆ ಪರಿಸ್ಥಿತಿ ಹಾಗೇ ಇದ್ದರೆ ವೈದ್ಯರನ್ನು ಸಂಪರ್ಕಿಸುತ್ತೇನೆ ಎಂದು ಉಮಾ ಭಾರತಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.