ನ್ಯೂಸ್

ಎನ್​ಐಟಿಯಲ್ಲಿ ಪ್ರಾಧ್ಯಾಪಕರ ಹುದ್ದೆಗಳಿಗೆ ಆಹ್ವಾನ

suchetana

ಭೋಪಾಲ್​ನಲ್ಲಿರುವ ಮೌಲಾನಾ ಆಜಾದ್​ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭತಿರ್ ಮಾಡಿಕೊಳ್ಳಲಾಗುತ್ತಿದೆ. ಒಟ್ಟು 107 ಸ್ಥಾನಗಳಿಗೆ ನೇಮಕಾತಿ ನಡೆಸಲಾಗುತ್ತಿದ್ದು, ಈ ಪೈಕಿ 27 ಬ್ಯಾಕ್​ಲಾಗ್​ ಹುದ್ದೆಗಳಾಗಿವೆ. ಮೂರು ಹಂತದ ವೇತನ ಶ್ರೇಣಿಯನ್ನು ಒಳಗೊಂಡಿದ್ದು, ಆರಂಭಿಕ ಕನಿಷ್ಠ ವೇತನವೇ 70,900 ರೂ. ಗಳಾಗಿವೆ.

ಒಟ್ಟು 107

* ವೇತನ ಶ್ರೇಣಿ

ಸಹಾಯಕ ಪ್ರಾಧ್ಯಾಪಕ- ಗ್ರೇಡ್​- ಐಐ ಹುದ್ದೆಯು ಗ್ರೂಪ್​ ಎ ಲೆವೆಲ್​ 10ರ ವೇತನ ಶ್ರೇಣಿಯದ್ದಾಗಿದ್ದು, ಆರಂಭಿಕ ವೇತನ 70,900 ರೂ. ಇರಲಿದೆ. ಲೆವಲ್​ 11ರ ಹುದ್ದೆಗಳಿಗೆ 73,100 ರೂ. ಆರಂಭಿಕ ವೇತನವಾಗಿದೆ. ಅಂತೆಯೇ ಗ್ರೇಡ್​- ಐ ಹುದ್ದೆಯು ಲೆವಲ್​ 12 ವೇತನ ಶ್ರೇಣಿ ಹೊಂದಿದ್ದು, ಆರಂಭಿಕ 101500 ರೂ. ವೇತನ ನೀಡಲಾುತ್ತದೆ.

* ಹುದ್ದೆಗಳ ವರ್ಗೀಕರಣ

ಸಾಮಾನ್ಯ ವರ್ಗಕ್ಕೆ 32, ಒಬಿಸಿ-22, ಎಸ್​13, ಎಸ್​ಟಿ 6, ಆರ್ಥಿಕ ಹಿಂದುಳಿದ ವರ್ಗಕ್ಕೆ 7 ಹುದ್ದೆಗಳನ್ನು ಮೀಸಲಿಡಲಾಗಿದೆ. ಒಟ್ಟು 27 ಹುದ್ದೆಗಳನ್ನು ಬ್ಯಾಕ್​ಲಾಗ್​ ಹುದ್ದೆಗಳೆಂದು ವಗಿರ್ಕರಿಸಲಾಗಿದೆ. ಒಟ್ಟಾರೆ ಹುದ್ದೆಗಳಲ್ಲಿ 8 ಸ್ಥಾನಗಳನ್ನು ಅಂಗವಿಕಲರಿಗಾಗಿ ಮೀಸಲಿಡಲಾಗಿದೆ.

ಎಸ್​ಸಿ, ಎಸ್​ಟಿ ಹಾಗೂ ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಉಳಿದವರಿಗೆ 1200 ರೂ. ನಿಗದಿಪಡಿಸಲಾಗಿದೆ. ಅನಿವಾಸಿ ಅಥವಾ ವಿದೇಶದಲ್ಲಿರುವ ಭಾರತೀಯರು 50 ಡಾಲರ್​ ಪಾವತಿಸತಕ್ಕದ್ದು.

* ಯಾವ ವಿಭಾಗದಲ್ಲಿ ಅವಕಾಶ

ಸಿವಿಲ್​, ಎಲೆಕ್ಟ್ರಿಕಲ್​, ಮೆಕ್ಯಾನಿಕಲ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯನಿಕೇಷನ್​, ಮೆಟಿರಿಯಲ್​ ಆ್ಯಂಡ್​ ಮೆಟಲಜಿರ್ಕಲ್​ ಇಂಜಿನಿಯರಿಂಗ್​, ಕೆಮಿಕಲ್​, ಕಂಪ್ಯೂಟರ್​ ಸೈನ್ಸ್​, ಗಣಿತ, ಫಿಸಿಕ್ಸ್​, ಕೆಮಿಸ್ಟ್ರಿ, ಆಕಿಟೆಕ್ಟರ್​ ಆ್ಯಂಡ್​ ಪ್ಲಾನಿಂಗ್​, ಮಾನವಿಕ ಮತ್ತು ಸಮಾಜ ವಿಜ್ಞಾನ, ಕೃತಕ ಬುದ್ಧಿಮತ್ತೆ, ಪ್ರಾಡಕ್ಟ್​ ಡಿಸೈನ್​, ಮ್ಯಾನೇಜ್​ಮೆಂಟ್​ ಸ್ಟಡಿಸ್​, ವಾಟರ್​ ಮ್ಯಾನೇಜ್​ಮೆಂಟ್​ ಹಾಗೂ ಸೋಲಾರ್​ ಎನಜಿರ್ ವಿಭಾಗದಲ್ಲಿ ಹುದ್ದೆಗಳು ಖಾಲಿ ಇವೆ.

* ವಿದ್ಯಾರ್ಹತೆ

ಅಭ್ಯರ್ಥಿಗಳು ಆಯಾ ವಿಷಯದಲ್ಲಿ ಬಿಇ, ಬಿ.ಟೆಕ್​, ಪದವಿ, ಎಂಇ, ಎಂಟೆಕ್​, ಎಂಎಸ್​, ಸ್ನಾತಕೋತ್ತರ ಪದವಿ ಪಡೆದಿರಬೇಕು. ಗಣಿತ, ಕೃತಕ ಬುದ್ಧಿಮತ್ತೆ, ಪ್ರಾಡಕ್ಟ್​ ಡಿಸೈನ್​, ವಾಟರ್​ ಮ್ಯಾನೇಜ್​ಮೆಂಟ್​ ಬೋಧನೆಗೆ ಪಿಎಚ್​ಡಿ ಆಗಿರಬೇಕು.

* ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು, ಸಾಧನೆ, ಸಂಶೋಧನೆ ಆಧಾರದಲ್ಲಿ ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್​ ಮಾಡಲಾಗುತ್ತದೆ. ನಂತರ ಬೋಧನೆಗೆ ಸಂಬಂಧಿಸಿದಂತೆ ಪ್ರೆಸೆಂಟೇಷನ್​ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಅಧಿಸೂಚನೆಗೆ: https://bit.ly/3BrTY1f

ಮಾಹಿತಿಗೆ: http://www.manit.ac.in/

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.15, 2021

ಅರ್ಜಿಗಳನ್ನು ಸಂಸ್ಥೆಯ ವೆಬ್​ಸೈಟ್​ನಿಂದ ಡೌನ್​ಲೋಡ್​ ಮಾಡಿಕೊಂಡು ಕೈಬರಹ ಅಥವಾ ಟೈಪಿಂಗ್​ ಮೂಲಕ ಭತಿರ್ ಮಾಡಿ ಸಂಸ್ಥೆ ವಿಳಾಸಕ್ಕೆ ಕೊನೆಯ ದಿನಕ್ಕೆ ತಲುಪುವಂತೆ ಕಳುಹಿಸತಕ್ಕದ್ದು.

ವಿಳಾಸ: “The Registrar, MANIT, Bhopal – 462003”