ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್)ನ ಮುಖ್ಯ ಕಚೇರಿಯ ತಂತ್ರಜ್ಞಾನ ವಿಭಾಗಕ್ಕೆ ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು,ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 14
ಐಸಿಎಆರ್ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಒಂದು ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಕಚೇರಿ ಅವಧಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿದರೆ ಯಾವುದೇ ಹೆಚ್ಚುವರಿ ವೇತನ ಇರುವುದಿಲ್ಲ, ವರ್ಷಕ್ಕೆ 8 ದಿನ ಸಾಮಾನ್ಯ ರಜೆ, 2 ರಿಸ್ಟ್ರಿಕ್ಟೆಡ್ ರಜೆ ಜತೆ ವಾರದ ರಜೆ ಇರುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ಮೆಟನಿರ್ಟಿ ರಜೆ ಇರುತ್ತದೆ.
ಹುದ್ದೆ ವಿವರ
* ಯಂಗ್ ಪ್ರೊಫೆಷನಲ್-ಐ - (ಫೈನಾನ್ಸ್ ಆ್ಯಂಡ್ ಅಕೌಂಟ್ಸ್) - 7
* ಯಂಗ್ ಪ್ರೊಫೆಷನಲ್-ಐಐ - (ಫೈನಾನ್ಸ್ ಆ್ಯಂಡ್ ಅಕೌಂಟ್ಸ್) - 7
ವಿದ್ಯಾರ್ಹತೆ: ಬಿಕಾಂ/ಬಿಬಿಎ/ ಬಿಬಿಎಸ್ನಲ್ಲಿ ಶೇ.60 ಅಂಕ ಪಡೆದಿರಬೇಕು. ಅಥವಾ ಫೈನಾನ್ಸ್ನಲ್ಲಿ ಎಂಬಿಎ ಪದವಿ ಪಡೆದಿರಬೇಕು. ಐಟಿ ಅಪ್ಲಿಕೇಷನ್ಸ್ ಬಗ್ಗೆ ತಿಳಿದಿರಬೇಕು, ಎಸ್ಎಂ ವರ್ಡ್, ಎಕ್ಸಲ್, ಪವರ್ಪಾಯಿಂಟ್, ಟ್ಯಾಲಿ ಹಾಗೂ ಇತರ ಸಾಫ್ಟ್ವೇರ್ ಬಳಕೆ ಜ್ಞಾನ ಇರಬೇಕು.
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 45ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಯಂಗ್ ಪ್ರೊಫೆಷನಲ್-ಐ ಗೆ ಮಾಸಿಕ 25,000 ರೂ., ಹಾಗೂ ಯಂಗ್ ಪ್ರೊಫೆಷನಲ್-ಐಐಗೆ ಮಾಸಿಕ 35,000 ರೂ. ವೇತನ ನಿಗದಿಪಡಿಸಲಾಗಿದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ. ಸಂಸ್ಥೆಯ ಅಧಿಕೃತ ಕೆಲಸಗಳಿಗಾಗಿ ಪ್ರವಾಸ ಕೈಗೊಂಡಲ್ಲಿ 1200 ರಿಂದ 1500 ರೂ. ಟಿಎ/ ಡಿಎ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಪ್ಯಾನಲ್ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದರೆ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಸೂಚನೆ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅದರ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ Director (Finance), ICAR Headquarters, Krishi Bhawan, New Delhi - I I 0001
ವಿಳಾಸಕ್ಕೆ ಕಳುಹಿಸಲು ಸೂಚಿಸಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 20.7.2021
ಅಧಿಸೂಚನೆಗೆ: https://bit.ly/361a9F1
ಮಾಹಿತಿಗೆ: http://icar.org.in