ನ್ಯೂಸ್

ಕೃಷಿ ಸಂಬಂಧಿತ ಪದವಿ ಮುಗಿಸಿರುವಿರಾ? ಮರ ವಿಜ್ಞಾನ ಸಂಸ್ಥೆಯಲ್ಲಿ ನೇಮಕಾತಿ: 23 ಹುದ್ದೆಗಳಿಗೆ ಅರ್ಜಿ ಆಹ್ವಾನ

suchetana

ಬೆಂಗಳೂರಿನಲ್ಲಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಯೋಜನೆ ಆಧಾರಿತ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯೋಜನೆ ಮುಗಿಯುವವರೆಗೆ ಅಂದರೆ 2022 ರಿಂದ 2024ರ ವರೆಗೆ ಹುದ್ದೆಯ ಅವಧಿ ಇರಲಿದೆ.

ಹುದ್ದೆ ವಿವರ

* ರಿಸರ್ಚ್​ ಅಸೋಸಿಯೇಟ್​ - 1

* ಜೂನಿಯರ್​ ರಿಸರ್ಚ್​ ಫೆಲೊ - 1

* ಜೂನಿಯರ್​ ರಿಸರ್ಚ್​ ಫೆಲೊ/ ಜೂ. ಪ್ರಾಜೆಕ್ಟ್​ ಫೆಲೊ - 1

* ಸೀನಿಯರ್​ ಪ್ರಾಜೆಕ್ಟ್​ ಫೆಲೊ - 1

* ಜೂನಿಯರ್​ ಪ್ರಾಜೆಕ್ಟ್​ ಫೆಲೊ - 13

* ಪ್ರಾಜೆಕ್ಟ್​ ಅಸಿಸ್ಟೆಂಟ್​ - 6

ವಿದ್ಯಾರ್ಹತೆ: ಫಾರೆಸ್ಟ್ರಿ/ ಅಗ್ರಿಕಲ್ಚರ್​/ ಹಾರ್ಟಿಕಲ್ಚರ್​/ ಲ್​ೈಸೈನ್ಸ್​/ ಕೆಮಿಸ್ಟ್ರಿ/ ಜುವಾಲಜಿ/ ಅಗ್ರಿಕಲ್ಚರ್​/ ಮೈಕ್ರೋಬಯೋಲಜಿ/ ಆಗ್ರೋಾರೆಸ್ಟ್ರಿ/ ಬಯೋಟೆಕ್ನಾಲಜಿ/ ಬಾಟ್ನಿ/ ಬಯೋಟೆಕ್​/ ಜೆನೆಟಿಕ್ಸ್​/ ಎನ್ವಿರಾನ್​ಮೆಂಟ್​ ಸೈನ್ಸ್​/ ವುಡ್​ಸೈನ್ಸ್​ ಆ್ಯಂಡ್​ ಟೆಕ್ನಾಲಜಿ/ ಫಿಜಿಕ್ಸ್​ನಲ್ಲಿ ಬಿಎಸ್ಸಿ, ಎಂಎಸ್ಸಿ, ಬಿಟೆಕ್​, ಕೆಮಿಸ್ಟ್ರಿಯಲ್ಲಿ ಪಿಎಚ್​ಡಿ ಮಾಡಿರುವುದರ ಜತೆಗೆ ಸಂಶೋಧನಾ ಜ್ಞಾನ ಇರುವ ಅಭ್ಯರ್ಥಿಗಳಿಗೂ ಅವಕಾಶ ಇದೆ.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ರಿಂದ 35 ವರ್ಷದವರೆಗೆ ವಯೋಮಿತಿ ಇದೆ. ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ ವಯೋಮಿತಿ ಇಲ್ಲ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ವೇತನ: ರಿಸರ್ಚ್​ ಅಸೋಸಿಯೇಟ್​ಗೆ ಮಾಸಿಕ 47,000 ರೂ., ಜೂ.ರಿಸರ್ಚ್​ ಫೆಲೊಗೆ ಮಾಸಿಕ 31,000 ರೂ., ಸೀನಿಯರ್​ ಪ್ರಾಜೆಕ್ಟ್​ ಫಫೆಲೊಗೆ 23,000 ರೂ., ಜೂ. ಪ್ರಾಜೆಕ್ಟ್​ ಫೆಲೊಗೆ ಮಾಸಿಕ 20,000 ರೂ., ಪ್ರಾಜೆಕ್ಟ್​ ಅಸಿಸ್ಟೆಂಟ್​ಗೆ 19,000 ರೂ. ವೇತನ ಇದ್ದು ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

ಸಂದರ್ಶನ ನಡೆಯುವ ದಿನ: ಪ್ರಾಜೆಕ್ಟ್​ ಅಸಿಸ್ಟೆಂಟ್​ ಹುದ್ದೆಗೆ 2021ರ ಜು.30, ಉಳಿದ ಹುದ್ದೆಗಳಿಗೆ ಜು.29 ರಂದು ಬೆಳಗ್ಗೆ 10.30ರಿಂದ ಸಂದರ್ಶನ ಆರಂಭವಾಗಲಿದ್ದು, ಬೆಳಗ್ಗೆ 9.30 ರಿಂದ 10.30ರ ಒಳಗಾಗಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಸಂದರ್ಶನ ನಡೆಯುವ ಸ್ಥಳ: Institute of Wood Science and Technology, 18th Cross, Malleswaram, Bangalore – 560003

ಅಧಿಸೂಚನೆಗೆ: https://bit.ly/36MZLB6

ಮಾಹಿತಿಗೆ: http://iwst.icfre.gov.in