ನ್ಯೂಸ್

ಎಲ್​ಐಸಿ ಹೌಸಿಂಗ್​ ಫೈನಾನ್ಸ್​ನಿಂದ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ

suchetana

ಎಲ್​ಐಸಿ ಹೌಸಿಂಗ್​ ಫೈನಾನ್ಸ್​ ಲಿಮಿಟೆಡ್​ನ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ 6 ಅಸೋಸಿಯೇಟ್​ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಪ್ರಾಜೆಕ್ಟ್​ ಲೈಫ್‌​ ಸೈಕಲ್​ ನಿರ್ವಹಣೆ, ಮಾನಿಟರಿಂಗ್​ ಮತ್ತು ಯೋಜನೆಗಳ ಮೌಲ್ಯಮಾಪನ, ಸಿಎಸ್​ಆರ್​ ಫೌಂಡೇಷನ್​/ ಸಂಸ್ಥೆಗಳಲ್ಲಿ ಸುಸ್ಥಿರತೆಯಯ ಬಗ್ಗೆ ವರದಿ ಮಾಡಿರುವ ಕನಿಷ್ಠ 1 ವರ್ಷದ ವೃತ್ತಿ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆನ್​ಲೈನ್​ ಅರ್ಜಿ ಗಳಿಗೆ ಮಾತ್ರ ಅವಕಾಶವಿದ್ದು, http://www.lichousing.com

ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಎಲ್ಲಿ ನೇಮಕಾತಿ?: ದೆಹಲಿ, ಕೋಲ್ಕತಾ, ಬೆಂಗಳೂರು, ಭೋಪಾಲ್​, ಮುಂಬೈನ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ: 1.1.2021ರ ಒಳಗೆ ಸೋಷಿಯಲ್​ ವರ್ಕ್​/ ರೂರಲ್​ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ 55 ಅಂಕ ಪಡೆದಿರಬೇಕು(ಶೇ.54.99 ಅನ್ನು ಶೇ.55ಕ್ಕಿಂತ ಕಡಿಮೆ ಎಂದು ಭಾವಿಸಲಾಗುವುದು). ದೂರ ಶಿಕ್ಷಣ, ಅರೆಕಾಲಿಕ ಮತ್ತು ಪತ್ರವ್ಯವಹಾರದ ಮೂಲಕ ಪಡೆದ ಪದವಿಗಳನ್ನು ಪರಿಗಣಿಸುವುದಿಲ್ಲ.

ವಯೋಮಿತಿ: 1.1.2021ಕ್ಕೆ ಅನ್ವಯವಾಗುವಂತೆ 23 ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಇತರ ಕೌಶಲಗಳು: ಸಂವಹನ, ಲಿಖಿತ, ಮೌಖಿಕ ಕೌಶಲ, ಮುಖ್ಯವಾಹಿನಿಯ ವ್ಯವಹಾರ ಮಾದರಿಯ ತಿಳಿವಳಿಕೆ, ಸಿಎಸ್​ಆರ್​ ಪ್ರಸ್ತಾಪಗಳ ಮೂಲದಿಂದ ಯೋಜನೆಗಳ ಮೌಲ್ಯಮಾಪನ, ಸಂಶೋಧನೆ ಮತ್ತು ವಿಶ್ಲೇಷಣೆ ಕೌಶಲ, ಪ್ರಸ್ತುತಿ ಕೌಶಲಗಳು ಅವಶ್ಯ.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆಗೆ ಆಹ್ವಾನಿಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆನ್​ಲೈನ್​ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು. ಆನ್​ಲೈನ್​ ಪರೀಕ್ಷೆ ಹಾಗೂ ಸಂದರ್ಶನದ ಮಾಹಿತಿಯನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮೇಲ್​ ಹಾಗೂ ನೋಂದಾಯಿತ ದೂರವಾಣಿ ಸಂಖ್ಯೆ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 6.6.2021

ಅಧಿಸೂಚನೆಗೆ: https://bit.ly/3yZv9JQ

ಮಾಹಿತಿಗೆ: www.lichousing.com