ನ್ಯೂಸ್

ಹೆಸ್ಕಾಂನಲ್ಲಿ ಡಿಪ್ಲೊಮಾ, ಪದವೀಧರರಿಗೆ ತರಬೇತಿ- 200 ಮಂದಿಗೆ ಅವಕಾಶ- 7 ಸಾವಿರ ರೂ. ಸ್ಟೈಪೆಂಡ್‌

suchetana

ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನಲ್ಲಿ 2021- 22ನೇ ಸಾಲಿನ ಅಪ್ರೆಂಟೀಸ್​ (ಶಿಶುಕ್ಷು) ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಬಿಇ ಪದವಿ ಹಾಗೂ ಡಿಪ್ಲೊಮಾ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯು 1 ವರ್ಷ ಇರಲಿದೆ. ತರಬೇತಿಗೆ ಸಂಬಂಧಿಸಿದಂತೆ ಅಪ್ರೆಂಟೀಸ್​ಶಿಪ್​ ಆ್ಯಕ್ಟ್​ 1961ರ ನಿಯಮ ಪಾಲಿಸುವುದಾಗಿ ತಿಳಿಸಲಾಗಿದೆ.

ಒಟ್ಟು ಸ್ಥಾನಗಳು: 200

ಸ್ಥಾನಗಳ ವಿವರ

-ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​

* ಬಿಇ ಗ್ರಾಜುಯೇಟ್​ -125

* ಡಿಪ್ಲೊಮಾ -75

ಸ್ಟೈಪೆಂಡ್​: ಬಿಇ ಅಪ್ರೆಂಟೀಸ್​ಗೆ ಮಾಸಿಕ 7000 ರೂ., ಡಿಪ್ಲೊಮಾ ಅಭ್ಯರ್ಥಿಗಳಿಗೆ 5,000 ರೂ. ಸ್ಟೈಪೆಂಡ್ ನೀಡಲಾಗುವುದು.

ವಿದ್ಯಾರ್ಹತೆ: 2019, 2020, 2021ರಲ್ಲಿ ಬಿಇ, ಬಿ.ಟೆಕ್​, ಡಿಪ್ಲೊಮಾ ಪದವಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವಯೋಮಿತಿ, ಮೀಸಲಾತಿ ಅನ್ವಯ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

ಇತರ ಸೂಚನೆಗಳು: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಬರೆಯಲು, ಓದಲು, ಮಾತನಾಡಲು ಬರಬೇಕು. ವಯೋಮಿತಿ, ಮೀಸಲಾತಿಯು ಅಪ್ರೆಂಟೀಸ್​ ಆ್ಯಕ್ಟ್​ 1961ರ ಅನ್ವಯ ಇರಲಿದೆ ಎಂದು ತಿಳಿಸಲಾಗಿದೆ. ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ, ವಸತಿ ಸೌಕರ್ಯ ಇರುವುದಿಲ್ಲ. ದಾಖಲೆ ಪರಿಶೀಲನೆ ಸಮಯದಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲ ದಾಖಲೆ ಹಾಗೂ ಪ್ರಮಾಣಪತ್ರದ ಮೂಲ ಪ್ರತಿ ತರಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಚಾಲನೆಯಲ್ಲಿರುವ ದೂರವಾಣಿ ಸಂಖ್ಯೆ ಹಾಗೂ ಇಮೇಲ್​ ಐಡಿಯನ್ನೇ ನೀಡಬೇಕು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಕೆ ಆರಂಭ: 27.9.2021

ಎನ್​ಎಟಿಎಸ್​ ಪೋರ್ಟಲ್​ನಲ್ಲಿ ದಾಖಲಾಗಲು ಕೊನೇ ದಿನ: 17.10.2021

ಅರ್ಜಿ ಸಲ್ಲಿಸಲು ಕೊನೇ ದಿನ: 20.10.2021

ಶಾರ್ಟ್​ಲಿಸ್ಟ್​ ಪ್ರಕಟ: 22.10.2021

ದಾಖಲೆ ಪರಿಶೀಲನೆಗೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ನವೆಂಬರ್​ 9 ರಿಂದ 12ನೇ ತಾರೀಕಿನ ವರೆಗೆ ನಡೆಯುವ ದಾಖಲೆ ಪರಿಶೀಲನೆ ಆಹ್ವಾನಿಸಲಾಗುವುದು. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ವರೆಗೆ O/o Executive Engineer (Ele), ITI, HESCOM, Karwar Road, Vidyut Nagar, Hubballi - 580025 ಸ್ಥಳದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುವುದು.

ಅಧಿಸೂಚನೆಗೆ: https://bit.ly/3zvFeNG

ಮಾಹಿತಿಗೆ: http://hescom.karnataka.gov.in