ನ್ಯೂಸ್

ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಅವಕಾಶ

suchetana

ಭಾರತೀಯ ಸೇನೆಯಿಂದ ಇಂಜಿನಿಯರಿಂಗ್​ ಪದವೀಧರರಾಗಿರುವ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಮತ್ತು ರಕ್ಷಣಾ ಸಿಬ್ಬಂದಿಯ ವಿಧವಾ ಅಭ್ಯರ್ಥಿಗಳಿಂದ ಶಾರ್ಟ್​ ಸವಿರ್ಸ್​ ಕಮಿಷನ್​ (ಎಸ್​ಎಸ್​ಸಿ) ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಸ್ಥಾನಗಳು: 189

ಎಸ್​ಎಸ್​ಸಿ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನ ಆಫೀಸರ್ಸ್​ ಟ್ರೇನಿಂಗ್‌​ ಅಕಾಡೆಮಿಯಲ್ಲಿ (ಒಟಿಎ) ತರಬೇತಿ ನೀಡಲಾಗುವುದು. 189 ಸ್ಥಾನಗಳಲ್ಲಿ ಪುರುಷ ಅಭ್ಯರ್ಥಿಗೆ 175 ಸ್ಥಾನ, ಮಹಿಳಾ ಅಭ್ಯರ್ಥಿಗೆ 14 ಸ್ಥಾನ ಮೀಸಲಿರಿಸಲಾಗಿದೆ.

ಇಂಡಿಯನ್​ ಮಿಲಿಟರಿ ಅಕಾಡೆಮಿಯಲ್ಲಿ ನೀಡಲಾಗುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೇನೆಯಲ್ಲಿ ಲೆಫ್ಟಿನೆಂಟ್​ ಹಂತದ ಹುದ್ದೆಗಳನ್ನು ನೀಡಲಾಗುವುದು. ತರಬೇತಿಯ ಅವಧಿಯು 49 ವಾರಗಳಾಗಿರುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ವಿವಾಹವಾಗುವಂತಿಲ್ಲ.

ಯಾವ ವಿಭಾಗಗಳಲ್ಲಿ ತರಬೇತಿ, ಎಷ್ಟು ಸ್ಥಾನ?

* ಸಿವಿಲ್​/ ಬಿಲ್ಡಿಂಗ್​ ಕನ್​ಸ್ಟ್ರಕ್ಷನ್​ ಟೆಕ್ನಾಲಜಿ – 65

* ಆಕಿರ್ಟೆಕ್ಚರ್​ – 1

* ಮೆಕ್ಯಾನಿಕಲ್​ – 6

* ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ – 9

* ಎಲೆಕ್ಟ್ರಾನಿಕ್ಸ್​ – 2

* ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​/ ಕಂಪ್ಯೂಟರ್​ ಟೆಕ್ನಾಲಜಿ/ ಎಂಎಸ್ಸಿ ಕಂಪ್ಯೂಟರ್​ ಸೈನ್ಸ್​ – 35

* ಇನ್​ಮೇರ್ಷನ್​ ಟೆಕ್ನಾಲಜಿ – 14

* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​ – 5

* ಟೆಲಿಕಮ್ಯುನಿಕೇಷನ್​ ಇಂಜಿನಿಯರಿಂಗ್​ – 4

* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ – 5

* ಸ್ಯಾಟಲೈಟ್​ ಕಮ್ಯುನಿಕೇಷನ್​ – 3

* ಮೈಕ್ರೋ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಮೈಕ್ರೋವೇವ್​ – 3

* ಏರೋನಾಟಿಕಲ್​ / ಏರೋಸ್ಪೇಸ್​/ ಎವಿಯೋನಿಕ್ಸ್​ – 7

* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​/ ಇನ್​ಸ್ಟ್ರುಮೆಂಟೇಷನ್​ – 4

* ಆಟೋಮೊಬೈಲ್​ ಇಂಜಿನಿಯರಿಂಗ್​ – 3

* ಇಂಡಸ್ಟ್ರಿಯಲ್​/ ಮ್ಯಾನುಫ್ಯಾಕ್ಚರಿಂಗ್​/ ಇಂಡಸ್ಟ್ರಿಯಲ್​ ಇಂಜಿನಿಯರಿಂಗ್​ – 6

* ಓಪ್ಟೋ ಎಲೆಕ್ಟ್ರಾನಿಕ್ಸ್​ – 3

* ಫೈಬರ್​ ಆಪ್ಟಿಕ್ಸ್​ – 2

* ಬಯೋ ಟೆಕ್ನಾಲಜಿ – 1

* ಬ್ಯಾಲಿಸ್ಟಿಕ್ಸ್​ ಇಂಜಿನಿಯರಿಂಗ್​ – 1

* ರಬ್ಬರ್​ ಟೆಕ್ನಾಲಜಿ – 1

* ಕೆಮಿಕಲ್​ ಇಂಜಿನಿಯರಿಂಗ್​ – 1

* ವರ್ಕ್​ಶಾಪ್​ ಟೆಕ್ನಾಲಜಿ – 3

* ಲೇಸರ್​ ಟೆಕ್ನಾಲಜಿ – 2

ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್​ ಪದವಿ ಪಡೆದಿರುವ ಅಥವಾ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ (1.10.2021ಕ್ಕೆ ಪದವಿ ಪ್ರಮಾಣಪತ್ರ ಪಡೆಯುವಂತಿರಬೇಕು) ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿಧವಾ ಅಭ್ಯರ್ಥಿಗಳು ನಾನ್​ ಟೆಕ್ನಿಕಲ್​ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಟೆಕ್ನಿಕಲ್​ ಹುದ್ದೆಗೆ ಬಿಇ/ಬಿ.ಟೆಕ್​ ಪದವಿ ಪಡೆದಿರಬೇಕು.

ವಯೋಮಿತಿ: 1.10.2021ಕ್ಕೆ ಅನ್ವಯವಾಗುವಂತೆ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ (2.10.1994-1.10.2001ರ ನಡುವೆ ಜನಿಸಿರಬೇಕು). ವಿಧವಾ ಅಭ್ಯರ್ಥಿಗೆ ಗರಿಷ್ಠ 35 ವರ್ಷ, (2.7.1994 ರಿಂದ 1.7.2001ರ ನಡುವೆ ಜನಿಸಿರಬೇಕು)

ಸ್ಟೈಪೆಂಡ್: ಐಎಂಎ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ 56,100 ರೂ. ಸ್ಟೈಪೆಂಡ್​ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 23.6.2021

ಅಧಿಸೂಚನೆಗೆ: https://bit.ly/3fofaNj

ಮಾಹಿತಿಗೆ: www.joinindianarmy.nic.in