ಮುಂಬೈನಲ್ಲಿರುವ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್ನಲ್ಲಿ (ಸಿ-ಡಾಕ್) ಖಾಲಿ ಇರುವ ಪ್ರಾಜೆಕ್ಟ್ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 51
ಸಿ-ಡಾಕ್ನಲ್ಲಿರುವ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯಥಿರ್ಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಯೋಜನೆಯ ಅವಶ್ಯಕತೆ ಆಧಾರದ ಮೇಲೆ 3 ವರ್ಷ ವಿಸ್ತರಿಸಲಾಗುವುದು. ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ವರ್ಗಾಯಿಸಬಹುದು. ಆನ್ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 23 ಸ್ಥಾನ, ಎಸ್ಸಿಗೆ 7, ಎಸ್ಟಿಗೆ 3, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 13, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 5 ಸ್ಥಾನ ಮೀಸಲಿರಿಸಲಾಗಿದೆ.
ಹುದ್ದೆ ವಿವರ
* ಪ್ರಾಜೆಕ್ಟ್ ಇಂಜಿನಿಯರ್
- ಸೀನಿಯರ್ ಇಂಜಿನಿಯರ್ - 1
- ಸೀನಿಯರ್ ಜಾವಾ ಡೆವಲಪರ್ - 10
- ಸೀನಿಯರ್ ಟೆಸ್ಟ್ ಇಂಜಿನಿಯರ್ - 2
- ಸೀನಿಯರ್ ಡೇಟಾ ಬೇಸ್ ಇಂಜಿನಿಯರ್ - 2
- ಸೀನಿಯರ್ ಡೆವಲಪ್ಮೆಂಟ್ ಆ್ಯಂಡ್ ಆಪರೇಷನ್ಸ್ ಇಂಜಿನಿಯರ್ - 2
- ಇಂಜಿನಿಯರ್ - 1
- ಡೇಟಾಬೇಸ್ ಇಂಜಿನಿಯರ್ - 2
- ಸಾಫ್ಟ್‌ವೇರ್ ಡಿಸೈನ್ ಆ್ಯಂಡ್ ಡೆವಲಪ್ಮೆಂಟ್ ಇಂಜಿನಿಯರ್ - 3
- ಟೆಸ್ಟ್ ಇಂಜಿನಿಯರ್ - 4
- ಜಾವಾ ಡೆವಲಪರ್ - 25
- ಡೆವಲಪ್ಮೆಂಟ್ ಆ್ಯಂಡ್ ಆಪರೇಷನ್ಸ್ ಇಂಜಿನಿಯರ್ - 3
ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಐಟಿ, ಬಿಇ, ಬಿಟೆಕ್, ಎಂಟೆಕ್, ಎಂಸಿಎ, ಎಂಇ, ಎಂಎಸ್ಸಿಯಲ್ಲಿ (ಕಂಪ್ಯೂಟರ್ ಸೈನ್ಸ್) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿ ಅನುಭವ ಅವಶ್ಯ
ವಯೋಮಿತಿ: 3.7.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 37 ವರ್ಷ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ವೇತನ
ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಯ ವರ್ಗಗಳಿಗೆ ಅನುಗುಣವಾಗಿ ಮಾಸಿಕ 36,158 ರೂ.ನಿಂದ 57,378 ರೂ. ವೇತನ ಇದೆ.
ನೇಮಕಾತಿ ವಿಧಾನ
ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಲಿಖಿತ ಪರೀಕ್ಷೆ ಅಂಕ, ಸಂದರ್ಶನದಲ್ಲಿ ಪಾಲ್ಗೊಂಡ ಬಗೆಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳಲಾಗುವುದು. ಆನ್ಲೈನ್ ಸಂದರ್ಶನದ ದಿನಾಂಕವನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು.
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಪಾವತಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 3.7.2021
ಅಧಿಸೂಚನೆಗೆ: https://bit.ly/3gLolZ4
ಮಾಹಿತಿಗೆ: https://cdac.in