ನ್ಯೂಸ್

ಬಿಇಎಲ್​ನಿಂದ ಇಂಜಿನಿಯರ್​ಗಳ ನೇಮಕಾತಿ: 14 ಹುದ್ದೆಗಳಿಗೆ ಆಹ್ವಾನ

suchetana

ಬೆಂಗಳೂರಿನಲ್ಲಿರುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ Agra Smart City Help Desk for its Homeland Security and Smart City Business SBU ನಲ್ಲಿ ಕಾರ್ಯನಿರ್ವಹಿಸಲು ಇಂಜಿನಿಯರ್​ಗಳ ಹುಡುಕಾಟದಲ್ಲಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.

ಒಟ್ಟು ಹುದ್ದೆಗಳು: 14


ಬಿಇಎಲ್​ನಲ್ಲಿ ಟ್ರೇನಿ ಹಾಗೂ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗಳಿದ್ದು, ಆರಂಭದಲ್ಲಿ ಅಭ್ಯರ್ಥಿಗಳನ್ನು ಆಗ್ರಾ ಟಕಕ್ಕೆ ನೇಮಕ ಮಾಡಲಾಗುವುದು ನಂತರ ದೇಶದ ಯಾವುದೇ ಭಾಗಕ್ಕಾದರೂ ವರ್ಗಾವಣೆ ಮಾಡಬಹುದಾಗಿದೆ. ಇದಕ್ಕೆ ಸಿದ್ಧರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿಸಲ್ಲಿಸಲು ಸೂಚಿಸಲಾಗಿದೆ. ಟ್ರೇನಿ ಇಂಜಿನಿಯರ್​ ಹುದ್ದೆಯು 1 ವರ್ಷ ಹಾಗೂ ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಯು 2 ವರ್ಷದ ಅವಧಿಗೆ ಒಳಪಟ್ಟಿದ್ದು, ಕಾರ್ಯಾವಧಿಯನ್ನು ಮತ್ತೆ 3-4 ವರ್ಷ ವಿಸ್ತರಿಸಬಹುದು. ಶ್ಟಿ್​ನಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು ಹಾಗೂ ಇಂಗ್ಲಿಷ್​, ಹಿಂದಿ ಭಾಷಾ ಜ್ಞಾನ ಅವಶ್ಯ.

ಹುದ್ದೆ ವಿವರ
* ಟ್ರೇನಿ ಇಂಜಿನಿಯರ್​ ಐ - 10
* ಪ್ರಾಜೆಕ್ಟ್​ ಇಂಜಿನಿಯರ್​ ಐ - 4

ಶೈಕ್ಷಣಿಕ ಅರ್ಹತೆ:
ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿಕಮ್ಯುನಿಕೇಷನ್​/ ಟೆಲಿಕಮ್ಯುನಿಕೇಷನ್​/ ಕಮ್ಯುನಿಕೇಷನ್​ ಆ್ಯಂಡ್​ ಕಂಪ್ಯೂಟರ್​ ಸೈನ್ಸ್​, ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ನಲ್ಲಿ ಬಿಇ, ಬಿ.ಟೆಕ್​ ಪದವಿ ಪಡೆದಿರಬೇಕು. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು, ಉಳಿದ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ 2 ವರ್ಷ, ಟ್ರೇನಿ ಇಂಜಿನಿಯರ್​ಗೆ 1 ವರ್ಷ ವೃತ್ತಿ ಅನುಭವ ಕೇಳಲಾಗಿದೆ.

ವಯೋಮಿತಿ: 1.8.2021ಕ್ಕೆ ಅನ್ವಯವಾಗುವಂತೆ ಟ್ರೇನಿ ಇಂಜಿನಿಯರ್​ಗೆ ಗರಿಷ್ಠ 25 ವರ್ಷ, ಪ್ರಾಜೆಕ್ಟ್​ ಇಂಜಿನಿಯರ್​ಗೆ ಗರಿಷ್ಠ 28 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ವೇತನ: ಟ್ರೇನಿ ಇಂಜಿನಿಯರ್​ಗೆ ಮೊದಲ ವರ್ಷ ಮಾಸಿಕ 25,000 ರೂ. 2ನೇ ವರ್ಷ ಮಾಸಿಕ 28,000, 3ನೇ ವರ್ಷ 31,000 ರೂ. ವೇತನ ನಿಗದಿಪಡಿಸಲಾಗಿದೆ. ಪ್ರಾಜೆಕ್ಟ್​ ಇಂಜಿನಿಯರ್​ಗೆ ಮೊದಲ ವರ್ಷ ಮಾಸಿಕ 35,000 ರೂ., 2ನೇ ವರ್ಷ 40,000 ರೂ., 3ನೇ ವರ್ಷ 45,000 ರೂ., 4ನೇ ವರ್ಷಕ್ಕೆ ಮಾಸಿಕ 50,000 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಸಿದ್ಧಪಡಿಸಲಾದ ಆಯ್ದಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಇಎಲ್​ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು.

ಅರ್ಜಿಶುಲ್ಕ: ಎಸ್​ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಟ್ರೇನಿ ಹುದ್ದೆಗೆ 200 ರೂ., ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಗೆ 500 ರೂ. ಅರ್ಜಿಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 8.9.2021
ಅಧಿಸೂಚನೆಗೆ: https://bit.ly/38h6tjB
ಮಾಹಿತಿಗೆ: http://www.bel-india.in