ನ್ಯೂಸ್

ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ

suchetana

ಕೇಂದ್ರ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮುಂಬೈನಲ್ಲಿರುವ ಡೈರೆಕ್ಟೊರೇಟ್ ಆಫ್​ ಪರ್ಚೇಸ್ ಆ್ಯಂಡ್ ಸ್ಟೋರ್ಸ್ (ಡಿಪಿಎಸ್) ವಿಭಾಗದಲ್ಲಿ ವಿವಿಧ 74 ಹುದ್ದೆಗಳು ಖಾಲಿ ಇದ್ದು, ಮಹಿಳಾ ಅಭ್ಯರ್ಥಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ.

ಡಿಪಿಎಸ್‍ನ ಗ್ರೂಪ್ ಬಿ ಮತ್ತು ಸಿ ಯಲ್ಲಿ ಹುದ್ದೆಗಳು ಖಾಲಿ ಇದ್ದು, ಮುಂಬೈ ಮತ್ತು ದೇಶಾದ್ಯಂತ ಇರುವ ಡಿಪಿಎಸ್‍ನ ಪ್ರಾದೇಶಿಕ ಕಚೇರಿಗಳಲ್ಲಿ ನೇಮಕ ಮಾಡಲಾಗುವುದು.

74 ಹುದ್ದೆಗಳಲ್ಲಿ ಎಸ್‍ಸಿ ಅಭ್ಯರ್ಥಿಗಳಿಗೆ 11 ಸ್ಥಾನ, ಎಸ್‍ಟಿಗೆ 5, ಇತರ ಹಿಂದುಳಿದ ವರ್ಗಕ್ಕೆ- 20, ಸಾಮಾನ್ಯವರ್ಗಕ್ಕೆ -32, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 6 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಹುದ್ದೆಗೆ ಅನುಗುಣವಾಗಿ ಮಾಸಿಕ 25,500 ರೂ.ನಿಂದ 35,400 ರೂ. ವೇತನ ನಿಗದಿಯಾಗಿದ್ದು, ಸರ್ಕಾರದ ನಿಯಮದನ್ವಯ ಭತ್ಯೆಗಳನ್ನು ನೀಡಲಾಗುವುದು.

ಹುದ್ದೆ, ಸಂಖ್ಯೆ ವಿವರ

* ಸ್ಟೆನೋಗ್ರಾಫರ್ (ಗ್ರೇಡ್‍ಐಐ) - 2

* ಸ್ಟೆನೋಗ್ರಾಫರ್ (ಗ್ರೇಡ್ ಐಐಐ) - 4

* ಅಪ್ಪರ್ ಡಿವಿಷನ್ ಕ್ಲರ್ಕ್ - 5

* ಜೂನಿಯರ್ ಪರ್ಚೇಸ್ ಅಸಿಸ್ಟೆಂಟ್/ ಜೂ. ಸ್ಟೋರ್ ಕೀಪರ್ - 63

ವಿದ್ಯಾರ್ಹತೆ

ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ಇಂಗ್ಲಿಷ್ ಷಾರ್ಟ್‍ಹ್ಯಾಂಡ್ ತಿಳಿದಿರಬೇಕು. ಯಾವುದೇ ಪದವಿ, ವಿಜ್ಞಾನ/ ಕಾಮರ್ಸ್ ಪದವಿ ಮತ್ತು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಡಿಪೆÇ್ಲಮಾದಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ

 27.12.2020ಕ್ಕೆ ಹುದ್ದೆಗೆ ಅನುಗುಣವಾಗಿ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಕ್ಕೆ 3ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷ ವಯೋಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ:

ಬಹು ಮಾದರಿ ಆಯ್ಕೆ ಪರೀಕ್ಷೆ, ಸ್ಟೆನೋಗ್ರಫಿ ಸ್ಕಿಲ್ ಪರೀಕ್ಷೆ ನಡೆಸಲಾಗುವುದು. ಸ್ಟೆನೋಗ್ರಾಫರ್ ಮತ್ತು ಅಪ್ಪರ್ ಡಿವಿಷನ್ ಕ್ಲರ್ಕ್‍ಗೆ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ, ರೀಸನಿಂಗ್, ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ (ಅರ್ಥಮೆಟಿಕ್) ಕುರಿತ ಪ್ರಶ್ನೆಗಳನ್ನು ಕೇಳಲಾಗುವುದು.

ಜೂನಿಯರ್ ಸ್ಟೋರ್​ಕೀಪರ್ ಹುದ್ದೆಗೆ, ಮೇಲ್ಕಂಡ ವಿಷಯಗಳ ಜತೆ 12ನೇ ತರಗತಿ ಲೆವೆಲ್‍ನ ವಿಜ್ಞಾನ, ಗಣಿತ ವಿಷಯಗಳನ್ನು ಕೇಳಲಾಗುವುದು. ಜತೆಗೆ ಕಂಪ್ಯೂಟರ್ ಕುರಿತ ಪ್ರಶ್ನೆಗಳು ಇರುತ್ತವೆ.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 27.12.2020

ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ : https://bit.ly/39PZwrY

ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ : https://www.dpsdae.gov.in

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ