ಈ ಮೊದಲು ಮೀಡಿಯಾ ಲ್ಯಾಬ್ ಏಷ್ಯಾ ಎಂದು ಕರೆಯಲಾಗುತ್ತಿದ್ದ ಕಂಪನಿಯನ್ನು ಈಗ ಡಿಜಿಟಲ್ ಇಂಡಿಯಾ ಕಾರ್ಪೋರೇಷನ್ ಎಂದು ಮಾರ್ಪಡಿಸಲಾಗಿದೆ. ಇದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದ ಲಾಭರಹಿತ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಡಿಜಿಟಲ್ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಇ-ಗವರ್ನೆನ್ಸ್ಗೆ ಸಂಬಂಧಿಸಿದಂತೆ ವಿವಿಧ ಸಚಿವಾಲಯ, ಇಲಾಖೆಗಳಿಗೆ ವ್ಯೂಹಾತ್ಮಕ ನೆರವು ಒದಗಿಸುತ್ತಿದೆ. ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ, ಶೈಕ್ಷಣಿಕ ಅಂಕ, ಕೌಶಲ ಆಧರಿಸಿ ವೇತನ ನಿಗದಿಪಡಿಸಲಾಗುವುದು. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳಿಗೆ ಸಂದರ್ಶನದ ಮಾಹಿತಿಯನ್ನು ಕಳುಹಿಸಲಾಗುವುದು.
ಹುದ್ದೆ ವಿವರ
- ಉಮಂಗ್ ಯೋಜನೆ - 34
* ಡೆವಲಪರ್/ ಸೀನಿಯರ್ ಡೆವಲಪರ್ (ಬ್ಯಾಕ್ಎಂಡ್-ಕೋರ್- 2, ುಲ್ ಸ್ಟಾಕ್- 2, ಬಿಜಿನೆಸ್ ಇಂಟೆಲಿಜೆನ್ಸ್- 1, ಎಪಿಐ-3, ಡಬ್ಲುಎಸ್ಒ2 - 1)- 9 *ಲೀಡ್ (ಬಿಜಿನೆಸ್ ಇಂಟೆಲಿಜೆನ್ಸ್)-1 *ಟೆಕ್ನಿಕಲ್ ಆಕಿರ್ಟೆಕ್ಟ್- 1 *ಸಿಸ್ಟಂ ಸೆಕ್ಯುರಿಟಿ ಕನ್ಸಲ್ಟಂಟ್-1 *ಟೆಕ್ನಿಕಲ್ ಸಪೋರ್ಟ್ (ಲೀಡ್- 1, ಅನಾಲಿಸ್ಟ್-3) - 3 *ಕ್ವಾಲಿಟಿ ಅನಾಲಿಸ್ಟ್- 4 *ಕ್ವಾಲಿಟಿ ಅನಾಲಿಸ್ಟ್ ಲೀಡ್- 1 *ಪ್ರಾಡಕ್ಟ್ ಮ್ಯಾನೇಜರ್ - 1 *ಯುಎಕ್ಸ್ ಡಿಸೈನರ್ - 1 *ಯುಐ ಡಿಸೈನರ್ - 1 *ಕನ್ಸಲ್ಟಂಟ್/ ಲೀಡ್ ಬಿಜಿನೆಸ್ ಅನಾಲಿಸ್ಟ್ - 1 *ಬಿಜಿನೆಸ್ ಅನಾಲಿಸ್ಟ್ - 3 *ಡಾಟಾಬೇಸ್ ಅಡ್ಮಿನಿಸ್ಟ್ರೆಟರ್ - 1 *ಡೆವಲಪರ್ -ಡಾಟಾಬೇಸ್ - 1 *ಡೆವಲಪ್ಮೆಂಟ್ ಲೀಡ್-ಬ್ಯಾಕ್ಎಂಡ್ - 1 *ಸಿಸ್ಟಂ ಅಡ್ಮಿನಿಸ್ಟ್ರೆಟರ್ - 1 *ಅಸಿಸ್ಟೆಂಟ್ ಮ್ಯಾನೇಜರ್- ಎಐ ಕನ್ವೇಷನಲ್ - 1 *ಡೆವಲಪರ್- ಆರ್ಎಎಸ್ - 1
ಏನು ಓದಿರಬೇಕು?
ಬಿಇ, ಬಿ.ಟೆಕ್/ ಎಂಟೆಕ್/ ಎಂ.ಎಸ್ಸಿ/ ಎಂಸಿಎ ಅಧ್ಯಯನ ಮಾಡಿದ್ದು, ವೆಬ್ ಡೆವಲಪ್ಮೆಂಟ್, ಸ್ಟಾ್ವೇರ್ ಟೆಸ್ಟಿಂಗ್ ಹಾಗೂ ಹುದ್ದೆ ಸಂಬಂಧಿತ ವಿಷಯಗಳಲ್ಲಿ ವೃತ್ತಿ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಅವಕಾಶ
ಅಧಿಸೂಚನೆಗೆ: https://bit.ly/3iFmN3b
- ಎನ್ಇಜಿಡಿ ವಿಭಾಗ - 5
* ಸಲಹೆಗಾರ- ಸಾಮಾಜಿಕ ಮಾಧ್ಯಮ ಮತ್ತು ವಿಷಯ ಬರಹಗಾರ - 3 * ವಿಡಿಯೋ ಎಡಿಟರ್ ಮತ್ತು ಮೋಷನ್ ಗ್ರಾಫಿಕ್ಸ್ ಕಲಾವಿದ - 1 *ಗ್ರಾಫಿಕ್ ಡಿಸೈನರ್ - 1
ವಿದ್ಯಾರ್ಹತೆ: ಜರ್ನಲಿಸಂ/ ಮಾಸ್ ಕಮ್ಯುನಿಕೇಷನ್/ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗ್ರಾಫಿಕ್ ಡಿಸೈನ್/ ಮಲ್ಟಿ ಮೀಡಿಯಾ/ ವಿಡಿಯೋ ಕ್ರಿಯೇಷನ್/ ಎಡಿಟಿಂಗ್ನಲ್ಲಿ ಕೋರ್ಸ್ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯಥಿರ್ಗಳು ಅರ್ಜಿಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೇ ದಿನ: 13.10.2021
ಅಧಿಸೂಚನೆಗೆ: https://bit.ly/2ZURNFW
ಇತರ ಹುದ್ದೆ:
ಇತರ ಡೆಪ್ಯುಟೇಷನ್ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ನೋಡಿ: https://bit.ly/3oG3Q4c
ಮಾಹಿತಿಗೆ: http://www.dic.gov.in