ನ್ಯೂಸ್

ಹವಾಮಾನ ವರದಿ ಹೇಳುವಾಗ ನೇರ ಪ್ರಸಾರವಾಯ್ತು ಪೋರ್ನ್‌ ವಿಡಿಯೋ: ವೀಕ್ಷಕರು ಕಕ್ಕಾಬಿಕ್ಕಿ

ವಾಷಿಂಗ್ಟನ್‌: ಕರೊನಾ ಹಿನ್ನೆಲೆಯಲ್ಲಿ ವರ್ಕ್‌ ಫ್ರಂ ಹೋಮ್‌ ಇದ್ದುದರಿಂದ ಆನ್‌ಲೈನ್‌ ಮೀಟಿಂಗ್‌ ವೇಳೆ ಅಶ್ಲೀಲ ಕ್ರಿಯೆಗಳೆಲ್ಲವೂ ನೇರಾನೇರವಾಗಿ ಹಲವಾರು ಮಂದಿಗೆ ಕಂಡ ಅನೇಕ ಘಟನೆಗಳು ನಡೆದು ಹೋಗಿವೆ. ಮನೆಯಲ್ಲಿ ಬೆತ್ತಲೆ ಇರುವುದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದು ಇತ್ಯಾದಿ ಅಶ್ಲೀಲ ಚಿತ್ರಗಳು, ವಿಡಿಯೋಗಳೆಲ್ಲವನ್ನೂ ಮೀಟಿಂಗ್‌ನಲ್ಲಿ ಇರುವವರು ನೋಡಿದ್ದಾಗಿದೆ. ಇದೀಗ ಅಂಥದ್ದೇ ಒಂದು ಘಟನೆ ಅಮೆರಿಕದಲ್ಲಿ ನಡೆದಿದೆ.

ಆದರೆ ಇದು ಅಂತಿಂಥ ಘಟನೆಯಲ್ಲಿ ಹವಾಮಾನ ವರದಿಯನ್ನು ಓದುವ ವೇಳೆ ಪೋರ್ನ್‌ ವಿಡಿಯೋ ಪ್ರಸಾರವಾಗಿರುವ ಘಟನೆ ಇದಾಗಿದೆ. ಟಿವಿ ಬ್ರಾಡ್‌ಕಾಸ್ಟಿಂಗ್​ ಸಂಸ್ಥೆಯ ‘ಕ್ರೇಮ್​ 2’ ನ್ಯೂಸ್​ ಚಾನೆಲ್​ನಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ. ಆ್ಯಂಕರ್‌ ಹವಾಮಾನ ವರದಿಯ ಬಗ್ಗೆ ವಿವರಿಸುತ್ತಿದ್ದರು. ಇಂದಿನ ಹವಾಮಾನ ವರದಿ ಹೀಗಿದೆ ನೋಡಿ ಎನ್ನುತ್ತಿದ್ದರು. ಆಕೆಗೆ ಅಲ್ಲಿ ಯಾವ ದೃಶ್ಯ ಕಾಣಿಸುತ್ತಿದೆ ಎನ್ನುವುದು ಗೊತ್ತೇ ಇರಲಿಲ್ಲ.

ಅದೇ ವೇಳೆ ಅತ್ತ ಕಡೆ ಹವಾಮಾನ ವರದಿಯ ಬದಲು ಜೋಡಿಗಳು ಸೆಕ್ಸ್‌ನಲ್ಲಿ ತೊಡಗಿಕೊಂಡಿರುವ ದೃಶ್ಯ ಪ್ರಸಾರವಾಗುತ್ತಿತ್ತು. ಇದನ್ನು ನೋಡಿದ ವೀಕ್ಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ಇದು ಆ್ಯಂಕರ್‌ ಗಮನಕ್ಕೆ ಬರಲೇಇಲ್ಲ. ಹವಾಮಾನ ವರದಿಯನ್ನು ವಿಶ್ಲೇಷಿಸುತ್ತಲೇ ಇದ್ದಳು. ಅತ್ತ ಹವಾಮಾನ ತಜ್ಞೆ ಮಿಶೆಲ್ ಬಾಸ್ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದ್ದರು.

13 ಸೆಕೆಂಡ್​ಗಳು ಈ ವಿಡಿಯೋ ಪ್ರಸಾರವಾಗಿದೆ. ಅಶ್ಲೀಲ ವಿಡಿಯೋ ಪ್ರಸಾರವಾಗಿದೆ. ಸಂಜೆ 6 ಗಂಟೆಯ ಈ ಬುಲೆಟಿನ್‌ ಪ್ರಸಾರವಾಗಿತ್ತು. ನಂತರ ಈ ಬಗ್ಗೆ ಹಲವಾರು ಫೋನ್‌ ಕರೆಗಳು ಬಂದಾಗ ತಪ್ಪಾಗಿರುವುದು ಅರಿತ ಚಾನೆಲ್‌ನವರು ರಾತ್ರಿ ಕ್ಷಮಾಪಣೆ ಕೇಳಿದ್ದಾರೆ.