ಇಸ್ರೇಲ್: ಪುಟ್ಟ ರಾಷ್ಟ್ರವಾದರೂ ಜಗತ್ತಿನಾದ್ಯಂತ ಭಾರಿ ಹೆಸರು ಮಾಡಿರುವ ದೇಶಗಳಲ್ಲಿ ಒಂದು ಇಸ್ರೇಲ್. ಕೃಷಿಯಲ್ಲಿ ಸದಾ ಮುಂದಿರುವ ಈ ದೇಶದ ಸುತ್ತಲೂ ಇರುವುದು ವೈರಿ ರಾಷ್ಟ್ರಗಳೇ ಅದಕ್ಕಾಗಿ ಸೇನೆಯನ್ನು ಬಲಪಡಿಸಿಕೊಳ್ಳಲು ಇಸ್ರೇಲ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ಇದಾಗಲೇ ದೊಡ್ಡಣ್ಣ ಅಮೆರಿಕಕ್ಕಿಂತಲೂ ಭದ್ರತಾ ಪಡೆಗಳಲ್ಲಿ ನಂ.1 ಸ್ಥಾನದಲ್ಲಿರುವ ಇಸ್ರೇಲ್‌ನ ರಕ್ಷಣಾ ಪಡೆ, ಅತ್ಯಾಧುನಿಕ ತಂತ್ರಜ್ಞಾನದಿಂದ ಹಿಡಿದು ಮಾನವ ಸಂಪನ್ಮೂಲದಲ್ಲಿಯೂ ಮುಂಚೂಣಿಯಲ್ಲಿದೆ.
ಇದು ಸೇನೆ, ಕೃಷಿಯ ಮಾತಾದರೆ ಇನ್ನು ಧಾರ್ಮಿಕತೆಯ ಬಗ್ಗೆ ಹೇಳುವುದಾದರೆ, ಇಸ್ರೇಲ್ ಈ ವಿಷಯದಲ್ಲಿ ಕೆಟ್ಟ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಆದ್ದರಿಂದ ಸರ್ವಧರ್ಮ ಸಮಾನತೆಯನ್ನು ಸಾರಲು ಇದಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಈ ರಾಷ್ಟ್ರ ಇದೀಗ ಜಗತ್ತಿನ ದೃಷ್ಟಿ ತನ್ನತ್ತ ನೆಡುವಂತೆ ಮಾಡಿದೆ.
ಅದೇನೆಂದರೆ, ಒಬ್ಬ ಹಿಂದೂ, ಒಬ್ಬ ಮುಸ್ಲಿಂ ಹಾಗೂ ಒಬ್ಬ ಕ್ರೈಸ್ತ ಮಹಿಳೆಯನ್ನು ಇಸ್ರೇಲ್ ರಕ್ಷಣಾ ಪಡೆ ನೇಮಕ ಮಾಡಿಕೊಂಡಿದ್ದು, ಈ ಬಗ್ಗೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡಿದೆ. ಒಬ್ಬ ಮುಸ್ಲಿಂ, ಒಬ್ಬ ಯಹೂದಿ, ಒಬ್ಬ ಕ್ರಿಶ್ಚಿಯನ್- ಎಲ್ಲರೂ ಏಕತೆಯಿಂದ ದೇಶದ ರಕ್ಷಣೆಗೆ ಸಿದ್ಧವಾಗಿದ್ದಾರೆ ಎಂದು ಈ ಫೋಟೋಗೆ ಶೀರ್ಷಿಕೆ ನೀಡಲಾಗಿದೆ.
ಈ ಮೂವರು ಮಹಿಳೆಯರು ಮೂರು ಧಾರ್ಮಿಕತೆಗಳನ್ನು ಪ್ರತಿಬಿಂಬಿಸುತ್ತದೆ. ಒಂದೇ ಸಮವಸ್ತ್ರದಲ್ಲಿ ಮೂರು ಧರ್ಮಿಯರು ಒಗ್ಗಟ್ಟಾಗಿ ದೇಶದ ರಕ್ಷಣೆಗೆ ಸಿದ್ಧವಾಗಿದ್ದಾರೆ. ಇದು ಇಸ್ರೇಲ್ ದೇಶ ಎಂದು ತನ್ನ ದೇಶವನ್ನು ಇಸ್ರೇಲ್ ಬಣ್ಣಿಸಿದೆ.