ತಂದೆ-ತಾಯಿಯ ಮೂರ್ತಿ ಸ್ಥಾಪಿಸಿ ದೇವಸ್ಥಾನ ಕಟ್ಟಿಸಿದ ನಿವೃತ್ತ ಎಸ್ಐ- ದಿನವೂ ಪೂಜೆ ಅಗಲಿದ ವ್ಯಕ್ತಿಗಳಿಗೆ ದೇವಾಲಯ ಕಟ್ಟುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅದೇ ರೀತಿ, ಇದೀಗ ನಿವೃತ್ತ ಪೊಲೀಸ್ ಸಬ್ ಇನ್ಸಪೆಕ್ಟರ್ ಒಬ್ಬರು ತಮ್ಮ ತಂದೆ-ತಾಯಿಯ ನೆನಪಿಗಾಗಿ ಅವರು ಇರುವಾಗಲೇ ದೇವಸ್ಥಾನವೊಂದನ್ನು ಕಟ್ಟಿಸಿ ಸುದ್ದಿಯಾಗಿದ್ದಾರೆ.
ಮಧುರೈನ ತಮ್ಮ ಮನೆಯಲ್ಲಿಯೇ ಪಾಲಕರಿಗಾಗಿ ದೇವಾಲಯ ಕಟ್ಟಿಸಿದ್ದು, ದಿನವೂ ಅವರು ಪೂಜೆ ಸಲ್ಲಿಸುತ್ತಾರೆ.
ದೇವಾಲಯ ನಿರ್ಮಾಣದ ಕುರಿತು ಮಾತನಾಡಿರುವ ನಿವೃತ್ತ ಎಸ್ಐ ರಮೇಶ ಬಾಬು, ತಂದೆ-ತಾಯಿಗಾಗಿ ದೇವಸ್ಥಾನ ಕಟ್ಟಿಸ ಆಸೆ ಅನೇಕ ವರ್ಷಗಳಿಂದಲೂ ಇತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೆಲಸದ ಒತ್ತಡದ ನಡುವೆ ವೇಳೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೀಗಾಗಿ ನಿವೃತ್ತನಾದ ನಂತರ ದೇವಸ್ಥಾನ ನಿರ್ಮಿಸಿದ್ದು, ಪ್ರತಿದಿನ ಅವರ ಮುಂದೆ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.
ನನ್ನ ಪಾಲಕರು ಈ ದೇವಸ್ಥಾನ ಕಟ್ಟಿಸಿದ ನಂತರ ನಿಧನರಾದರು. ಆದರೆ ಅವರು ಯಾವಾಗಲೂ ನನ್ನ ಜತೆಗೇ ಇರುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)