ನ್ಯೂಸ್

ಸೈನಿಕರನ್ನು ಸಾಲಾಗಿ ಕುಳ್ಳರಿಸಿ ಗುಂಡಿಕ್ಕಿದರು, ಶರಣಾದ ಪೊಲೀಸ್ ಅಧಿಕಾರಿಯನ್ನೂ ಹತ್ಯೆಗೈದು ವಿಡಿಯೋ ಮಾಡಿದರು!

ಕಾಬುಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ರಕ್ಕಸರ ಅಟ್ಟಹಾಸ ಮಿತಿಮೀರಿದೆ. ಒಂದೆಡೆ ಎಲ್ಲರೂ ಶರಣಾಗಿ ಎಂದು ಹೇಳುತ್ತಿದ್ದರೆ, ಅದೇ ಇನ್ನೊಂದೆಡೆ ಶರಣಾದವರನ್ನೂ ಹೊಡೆದು ಸಾಯಿಸುತ್ತಿದ್ದಾರೆ.

ಇದಾಗಲೇ ಅಪ್ಘಾನಿಸ್ತಾನದಲ್ಲಿನ ಹಲವಾರು ಸೈನಿಕರನ್ನು ಸಾಲಾಗಿ ಕುಳ್ಳರಿಸಿ ಅವರನ್ನು ಗುಂಡಿಕ್ಕಿ ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇದೀಗ ಅಫ್ಘಾನಿಸ್ತಾನದ ಪೊಲೀಸ್ ಮುಖ್ಯಸ್ಥರೊಬ್ಬರನ್ನು ತಾಲಿಬಾನಿಗಳು ಇದೇ ರೀತಿಯಾಗಿ ಹತ್ಯೆ ಮಾಡಿದ್ದಾರೆ.

ಇವರು ತಾಲಿಬಾನಿಗಳಿಗೆ ಶರಣಾದರೂ ಅವರನ್ನು ಕೊಲ್ಲಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅಫ್ಘಾನಿಸ್ತಾನದ ಬಾಗ್ದಿಸ್ ಪ್ರಾಂತ್ಯದ ಪೊಲೀಸ್​ ಮುಖ್ಯಸ್ಥ ಹಾಜಿ ಮುಲ್ಲಾ ಅಚಕ್‌ಜಾಯ್ ಅವರನ್ನು ಮಂಡಿಯೂರಿ ಕೂರಿಸಿ, ಕೈಗೆ ಮತ್ತು ಕಣ್ಣಿಗೆ ಬಟ್ಟೆ ಸುತ್ತಿ ಹಲವಾರು ಸುತ್ತು ಉಗ್ರರು ಗುಂಡು ಹಾರಿಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ತಾವು ಮಾಡಿರುವ ಈ ಮಹಾಕಾರ್ಯವನ್ನು ಖುದ್ದು ತಾಲಿಬಾನ್ ಸಂಬಂಧಿತ ನೆಟ್‌ವರ್ಕ್ ಒಂದು ಹಂಚಿಕೊಂಡಿದೆ.