ನ್ಯೂಸ್

ಆಕಾಶದಿಂದ ಧರೆಗುರುಳಿದ ಭಾರಿ ಗಾತ್ರದ ಚೆಂಡುಗಳು: ಬೆಚ್ಚಿಬಿದ್ದ ಜನ, ವಿಜ್ಞಾನಿಗಳಿಂದ ಪರಿಶೀಲನೆ

ಅಹಮದಾಬಾದ್‌ (ಗುಜರಾತ್‌): ರಾತ್ರಿ ಭಯಾನಕ ಶಬ್ದವೊಂದು ಗುಜರಾತಿನಲ್ಲಿ ಕೇಳಿಬಂದಿದ್ದು, ಜನರು ಭಯಭೀತರಾಗಿರುವ ಘಟನೆ ನಡೆದಿದೆ. ಭೂಕಂಪ ಇರಬೇಕೆಂದು ಓಡಿ ಹೋದರೆ ಅವರಿಗೆ ಅಲ್ಲಿ ಕಂಡದ್ದು ವಿಚಿತ್ರವಾದ ಲೋಹದ ದೊಡ್ಡ ಚೆಂಡುಗಳು. ಇದರಿಂದ ಜನರು ಬೆಚ್ಚಿಬಿದ್ದಿದ್ದಾರೆ.

ಆಕಾಶದಿಂದ ವಿಚಿತ್ರವಾದ ಲೋಹದ ದೊಡ್ಡ ಚೆಂಡುಗಳು ಗುಜರಾತಿನ ಹಲವಾರು ಕಡೆಗಳಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ.ಆನಂದ್ ಜಿಲ್ಲೆಯ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಎಂಬ ಮೂರು ಸ್ಥಳಗಳಲ್ಲಿ ಈ ಚೆಂಡುಗಳು ಕಾಣಿಸಿಕೊಂಡಿದ್ದು ಜನರು ಹೌಹಾರಿ ಹೋಗಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಚೆಂಡುಗಳನ್ನು ಸಂಗ್ರಹಿಸುವ ಪೊಲಿಸರು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹೆಚ್ಚಿನ ಮಾಹಿತಿಗಾಗಿ ಕಳುಹಿಸಿಕೊಡಲಾಗಿದೆ.

ಈ ಚೆಂಡುಗಳು ಸುಮಾರು 5 ಕೆ.ಜಿ ತೂಕದ ಗಂಟೆಯಂತೆ ಕಾಣುತ್ತಿರುವುದಾಗಿ ವರದಿಯಾಗಿದೆ. ಹಲವೆಡೆಗಳಲ್ಲಿ ರಾತ್ರಿ ಆಕಾಶದಿಂದ ಇವು ಉದುರಿದರೆ ಕಪ್ಪು ಲೋಹದ ಚೆಂಡು ಗುರುವಾರ ಸಂಜೆ 4:45 ರ ಸುಮಾರಿಗೆ ಭಲೇಜ್‌ನಲ್ಲಿ ಬಿದ್ದಿತು. ಇದಾದ ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಇದೇ ರೀತಿಯ ವಿಚಿತ್ರವಾದ ಲೋಹದ ಚೆಂಡುಗಳು ಬಿದ್ದಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಆನಂದ್ ನಗರದ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಜಿಯಾನ್ ಹೇಳಿದ್ದಾರೆ.

ಇವೆಲ್ಲವೂ ಮನೆಯಿಂದ ಸ್ವಲ್ಪ ದೂರ ಬಿದ್ದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಇದು ವಿಚಿತ್ರವಾಗಿದ್ದು, ತನಿಖೆ ಆರಂಭಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ವರದಿಗಳ ಪ್ರಕಾರ ಇಲ್ಲಿ ಹಿಂದೆಯೂ ಇಂತಹ ನಿಗೂಢ ಘಟನೆಗಳು ನಡೆದಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ `ಉಲ್ಕಾಶಿಲೆ’ ಆಕಾಶದಲ್ಲಿ ಕಾಣಿಸಿಕೊಂಡ ನಂತರ ಇದೇ ರೀತಿಯ ಘಟನೆ ಸಂಭವಿಸಿತ್ತು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಉತ್ಕಾಶಿಲೆಯನ್ನು ನ್ಯೂಜಿಲೆಂಡ್‌ನಿಂದ ಉಡಾವಣೆಯಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಖಚಿತಪಡಿಸಿದ್ದವು.