ನ್ಯೂಸ್

ಸರಿಗಮಪ ಖ್ಯಾತಿಯ ಸಿಂಗರ್ ಸುಬ್ರಮಣಿ ಪತ್ನಿ ಸಾವಿಗೆ ಬಿಗ್‌ ಟ್ವಿಸ್ಟ್‌- ಮೃತಪಟ್ಟಿರೋದು ಕರೊನಾದಿಂದ ಅಲ್ಲ!

ಬೆಂಗಳೂರು: ಜೀ ಕನ್ನಡದ ಪ್ರಸಿದ್ಧ ಸಿಂಗಿಂಗ್​ ರಿಯಾಲಿಟಿ ಶೋ “ಸರಿಗಮಪ”ದಲ್ಲಿ ಸ್ಪರ್ಧಿಸಿದ್ದ ಪೊಲೀಸ್ ಹೆಡ್‌ಕಾನ್ಸ್‌ಟೆಬಲ್‌ ಸುಬ್ರಮಣಿ ಅವರ ಪತ್ನಿ ಜ್ಯೋತಿ ಕರೊನಾದಿಂದಾಗಿ ಮೃತಪಟ್ಟಿರುವುದಾಗಿ ಬೆಳಗ್ಗೆಯಿಂದಲೂ ಸುದ್ದಿಯಾಗಿತ್ತು.

ಜ್ಯೋತಿಯವರು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ತಾಲೂಕಿನ ಶಾನಬೋಗನಹಳ್ಳಿ ಮೂಲದ ಸುಬ್ರಮಣಿ ಅವರ ಪತ್ನಿ. ಜ್ಯೋತಿ ಅವರು ಕಳೆದ‌ ಒಂದು ವಾರದಿಂದ ಕರೊನಾ ಸೋಂಕಿನಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸೋಮವಾರ ರಾತ್ರಿ ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

ಆದರೆ ಇದೀಗ ಈ ಸಾವಿನ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಿದ್ದು, ಇವರು ಮೃತಪಟ್ಟಿರುವುದು ಕರೊನಾದಿಂದ ಅಲ್ಲ, ಬದಲಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೇ 7 ರಂದು ಕೋಲಾರದ ಧರ್ಮರಾಯನಗರದ ನಿವಾಸದಲ್ಲಿ ಆತ್ಮಹತ್ಯೆಗೆ ಜ್ಯೋತಿ (33) ಯತ್ನಿಸಿದ್ದರು. ಕೂಡಲೇ ಕೋಲಾರದ ಸ್ಥಳೀಯ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಜ್ಯೋತಿ ಅವರಿಗೆ ವೆಂಟಿಲೇಟರ್ ಬೆಡ್ ಸಿಗದೇ ಪರದಾಡುವಂತಾಯಿತು. ಆ ಬಳಿಕ ಬೆಂಗಳೂರು ಹೊರವಲಯದ ಹೊಸಕೋಟೆ ಖಾಸಗಿ ಆಸ್ಪತ್ರೆಗೆ ಸಂಬಂಧಿಕರು ಕರೆದೊಯ್ದಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿರುವ ಸುಬ್ರಮಣಿ ಅವರು ಕಳೆದ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಸುಬ್ರಮಣಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಒಳ್ಳೆಯ ಗಾಯಕರೂ ಆಗಿರುವ ಇವರಿಗೆ ಸರಿಗಮಪ ಷೋನಲ್ಲಿ ಭಾಗವಹಿಸಿದ ಬಳಿಕ ಒಳ್ಳೆಯ ಹೆಸರು ಬಂದಿದೆ. ಒಂದು ಎಪಿಸೋಡ್​ನಲ್ಲಿ ಸುಬ್ರಮಣಿಪತ್ನಿ ಜ್ಯೋತಿ ಅವರು ಸಹ ಪಾಲ್ಗೊಂಡಿದ್ದರು.