ನ್ಯೂಸ್

ಹಾನಗಲ್‌ನಲ್ಲಿ ಕುತೂಹಲ ತಿರುವು ಪಡೆದ ಮತ ಎಣಿಕೆ- ಸಿಂದಗಿಯಲ್ಲಿ 3ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ

ಸಿಂದಗಿ/ಹಾನಗಲ್‌: ಸಿಂದಗಿಯಲ್ಲಿ ಎರಡನೇ ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಮೂರನೆಯ ಸುತ್ತಿನ ಎಣಿಕೆ ಕಾರ್ಯ ನಡೆಯುತ್ತಿದೆ, ಇದರಲ್ಲಿಯೂ ಸದ್ಯ ಬಿಜೆಪಿ ಮುನ್ನಡೆಯಲ್ಲಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರ ಅವರಿಗೆ ಮುನ್ನಡೆಯಾಗಿದೆ. ಎರಡನೇ ಸುತ್ತಿನಲ್ಲಿ ರಮೇಶ್ ಬೂಸನೂರ 4,031 ಮತಗಳ ಮುನ್ನಡೆ ದೊರೆತಿದೆ.

ಬಿಜೆಪಿಗೆ 9645, ಕಾಂಗ್ರೆಸ್‌ಗೆ 5614 ಹಾಗೂ ಹಾಗೂ ಜೆಡಿಎಸ್‌ಗೆ 289 ಮತ ಸಿಕ್ಕಿದೆ.

ಇದೇ ವೇಳೆ ಮಾತನಾಡಿದ ರಮೇಶ್‌ ಬೂಸನೂರು, ಅಂಚೆ ಮತ ಎಣಿಕೆ ಹಾಗೂ ಮೊದಲ ಸುತ್ತಿನ ಮತದಲ್ಲೂ ಮುನ್ನಡೆ ಸಾಧಿಸಿದ್ದೇನೆ. ಚುನಾವಣೆಯಲ್ಲೂ ಗೆಲ್ಲೋದು ಖಚಿತ. 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ. ಚುನಾವಣೆಯಲ್ಲಿ ಯಾವುದೇ ಜಾತಿ ಲೆಕ್ಕಾಚಾರ ಮೊಸಳೆ ಕಣ್ಣೀರು ಏನು ನಡೆಯೋದಿಲ್ಲ. ಎಮ್​ಸಿ ಮನಗೂಳಿ ಅವರಿಗಿಂತ ನನ್ನ ಮೇಲೆ ಜನರ ಅನುಕಂಪವಿದೆ. ನಾನು ಗೆಲ್ಲೋದು ಖಚಿತ ಎಂದು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಇಲ್ಲಿಯವರೆಗೆ ಕಾಂಗ್ರೆಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಹಾನ್‌ಗಲ್‌ ಕ್ಷೇತ್ರದಲ್ಲಿ ಇದೀಗ ಕುತೂಹಲದ ತಿರುವು ಪಡೆದುಕೊಂಡಿದ್ದು, 2ನೇ ಸುತ್ತಿನ ಬಳಿಕ ಕಾಂಗ್ರೆಸ್‌ ಹಿಂದಿಕ್ಕಿ ಬಿಜೆಪಿ 54 ಮತಗಳ ಅಂತರದ ಮುನ್ನಡೆ ಸಾಧಿಸಿದೆ.