ನ್ಯೂಸ್

VIDEO: ಡ್ರಗ್ಸ್‌, ಸಿಗರೇಟ್‌, ಸೆಕ್ಸ್‌ ಎಲ್ಲದಕ್ಕೂ ಮಗನಿಗೆ ಓಕೆ ಅಂದಿದ್ದೇನೆ: ಶಾರುಖ್‌ ವಿಡಿಯೋ ವೈರಲ್‌

suchetana

ಮುಂಬೈ: ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಒಳಗೆ ಕಳೆದ ಶನಿವಾರ ನಡೆಯುತ್ತಿದ್ದ ರೇವ್‌ ಪಾರ್ಟಿಯ ಮೇಲೆ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಶಾರುಖ್‌ ಖಾನ್‌ ಪುತ್ರ ಆರ್ಯನ್​ ಖಾನ್​ (23) ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿದೆ. ಪರೀಕ್ಷೆ ಮಾಡಿದಾಗ ಆರ್ಯನ್‌ ಖಾನ್‌ ಚರಸ್‌ ಸೇವನೆ ಮಾಡಿರುವುದು ಬೆಳೆಕಿಗೆ ಬಂದಿದೆ.

ಇದೀಗ ಇವರ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ನಟ ಶಾರುಖ್‌ ಖಾನ್‌ 1997ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತುಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಟಿ ಸಿಮಿ ಅಗರ್‌ವಾಲ್‌ ಅವರು ಖಾಸಗಿ ಟಿ.ವಿಯೊಂದರಲ್ಲಿ ನಡೆಸುವ ಷೋನಲ್ಲಿ ಭಾಗವಹಿಸಿದ್ದ ಶಾರುಖ್‌ ದಂಪತಿ, ಸಿಮಿ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ಆರ್ಯನ್​ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್​ ಸೇವಿಸಬಹುದು ಮತ್ತು ಹುಡುಗಿಯರ ಜತೆ ಸೆಕ್ಸ್​ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಲೈಫ್​ ಎಂಜಾಯ್​ ಮಾಡು ಎಂದಿದ್ದೇನೆ’ ಎಂದು ಶಾರುಖ್​ ಹೇಳಿದ್ದರು. ಈ ವಿಡಿಯೋ ಇದೀಗ ವೈರಲ್‌ ಆಗಿದೆ.

ಆ ಸಮಯದಲ್ಲಿ ಆರ್ಯನ್‌ ಆರೇಳು ವರ್ಷ ಬಾಲಕನಾಗಿದ್ದ. ಸಂದರ್ಶನದ ಸಮಯದಲ್ಲಿ ಶಾರುಖ್‌ ಈ ವಿಷಯವನ್ನು ತಮಾಷೆಯಾಗಿ ಹೇಳಿದ್ದು ಎಂದು ಕೆಲವರು ಹೇಳುತ್ತಿದ್ದರೂ, ಯಾವ ಅಪ್ಪ-ಅಮ್ಮನೂ ತಮಾಷೆಯಾಗಿ ಇಂಥ ಮಾತು ಹೇಳುವುದಿಲ್ಲ ಎಂದು ಇನ್ನು ಕೆಲವರು ಕಮೆಂಟ್‌ ಮಾಡಿದ್ದಾರೆ. ಅದೇನೆ ಇದ್ದರೂ ಅಪ್ಪ ಹೇಳಿದ ಈ ಮಾತನ್ನು ಮಗ ಪಾಲಿಸಿದ್ದಾನೆ ಬಿಡಿ, ಅವನ ತಪ್ಪಿಲ್ಲ ಎನ್ನುತ್ತಿದ್ದಾರೆ ಕಮೆಂಟಿಗರು!

ಸಾಲದು ಎಂಬುದಕ್ಕೆ ಪತಿ ಈ ರೀತಿ ಹೇಳುತ್ತಿರುವಾಗ ಅವರ ಪತ್ನಿ, ಆರ್ಯನ್‌ ತಾಯಿ ಗೌರಿ ಕೂಡ ಪತಿಯ ಮಾತಿಗೆ ಸಮ್ಮತಿ ಕೊಟ್ಟು ನಕ್ಕಿದ್ದರು!

ಇಲ್ಲಿದೆ ನೋಡಿ ಶಾರುಖ್‌ ಖಾನ್‌ ವಿಡಿಯೋ: