ಬೆಂಗಳೂರು: ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
* ಡಾ. ಪಿ. ರವೀಂದ್ರನಾಥ್ (ಡಿಐಜಿ- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಬೆಂಗಳೂರು) ಇವರನ್ನು ಡಿಜಿಪಿ (ತರಬೇತಿ-ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.
* ಅರುಣ್ ಚಕ್ರವರ್ತಿ ಜೆ. (ಎಡಿಜಿಪಿ) ಇವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಇಲ್ಲಿ ವರ್ಗಾಯಿಸಲಾಗಿದೆ.
* ಹರಿಶೇಖರನ್ ಪಿ. (ಎಡಿಜಿಪಿ-ತರಬೇತಿ) ಇವರನ್ನು ಎಡಿಜಿಪಿ (ಕರ್ನಾಟಕ ರಾಜ್ಯ ಅಗ್ನಿ ಮತ್ತು ತುರ್ತು ಸೇವೆಗಳು ಹಾಗೂ ಎಸ್ಡಿಆರ್ಎಫ್,ಬೆಂಗಳೂರು) ಇಲ್ಲಿ ವರ್ಗಾಯಿಸಲಾಗಿದೆ.